ಜನತಾದರ್ಶನ ಕಷ್ಟವಾಗುತ್ತಿದೆ

7

ಜನತಾದರ್ಶನ ಕಷ್ಟವಾಗುತ್ತಿದೆ

Published:
Updated:

ಬೆಂಗಳೂರು: ‘ಬೆಳಿಗ್ಗೆಯಿಂದ ಸಂಜೆವರೆಗೂ ಜನರ ಸಮಸ್ಯೆಗಳನ್ನೇ ಕೇಳುತ್ತ ಕುಳಿತರೆ, ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ , ಜನತಾದರ್ಶನ ನಡೆಸುವುದು ಕಷ್ಟವಾಗುತ್ತಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೃಹಕಚೇರಿ ಕೃಷ್ಣಾದಲ್ಲಿ ಹಾಗೂ ಜೆ.ಪಿ.ನಗರದ ನನ್ನ ನಿವಾಸ ಬಳಿ ನಿತ್ಯ 500ಕ್ಕೂ ಹೆಚ್ಚು ಜನರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸುತ್ತಿದ್ದೇನೆ. ತುಂಬ ಕಷ್ಟವಾಗುತ್ತಿದೆ. ಹಾಗಂತ, ಯಾವ ದೂರನ್ನೂ ಲಘುವಾಗಿ ಪರಿಗಣಿಸುತ್ತಿಲ್ಲ’ ಎಂದರು. ‌

‘ಜಿಲ್ಲಾ ಮಟ್ಟದಲ್ಲಿ ಬಗೆಹರಿಯದಂತಹ ಸಮಸ್ಯೆಗಳನ್ನು ಜನ ಜನತಾದರ್ಶನಕ್ಕೆ ಹೊತ್ತು ತರುತ್ತಿದ್ದಾರೆ. ಶೇ 80ಕ್ಕೂ ಹೆಚ್ಚು ಪ್ರಕರಣಗಳು ಶಾಲಾ ಮಕ್ಕಳ ಶುಲ್ಕ ಪಾವತಿ, ನಿರುದ್ಯೋಗ ಹಾಗೂ ಅನಾರೋಗ್ಯದ ಸಮಸ್ಯೆಗಳಾಗಿವೆ. ಇಂಥ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು ಶುಲ್ಕ ಪಾವತಿಸಿ ಪರಿಹರಿಸರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಜನರು ಸಹ ಪರಿಹಾರಕ್ಕಾಗಿ ತುಂಬ ದಿನ ಕಾಯುವುದಕ್ಕೆ ತಯಾರಿಲ್ಲ. ನೇರವಾಗಿ ಮುಖ್ಯಮಂತ್ರಿ ಅವರನ್ನೇ ಭೇಟಿಯಾದರೆ, ತಕ್ಷಣ ಪರಿಹಾರ ಸಿಗುತ್ತದೆಂಬ ನಿರೀಕ್ಷೆಯಲ್ಲಿ ಬರುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry