ಅರ್ಧದಷ್ಟು ಸಂಬಳ ಪಾವತಿಸಲು ನಿರ್ದೇಶನ

7

ಅರ್ಧದಷ್ಟು ಸಂಬಳ ಪಾವತಿಸಲು ನಿರ್ದೇಶನ

Published:
Updated:

ಬೆಂಗಳೂರು: ಅಮಾನತ್‌ ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಹೊಂದಿದ 35 ಅರ್ಜಿದಾರ ನೌಕರರಿಗೆ ಇದೇ 15ರೊಳಗೆ ಬಾಕಿ ಉಳಿದಿರುವ ವೇತನದಲ್ಲಿ ಅರ್ಧದಷ್ಟು ಪಾವತಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ನೌಕರರ ಸಂಘದ ಸದಸ್ಯರೂ ಆದ 35 ಜನ ಸ್ವಯಂ ನಿವೃತ್ತಿ ಹೊಂದಿದ ನೌಕರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.

‘ರಂಜಾನ್‌ ಹಬ್ಬ ಇರುವುದರಿಂದ ಕೂಡಲೇ ವೇತನ ಪಾವತಿ ಮಾಡಬೇಕು’ ಎಂದು ನ್ಯಾಯಮೂರ್ತಿಗಳು ಬ್ಯಾಂಕ್‌ಗೆ ಮಧ್ಯಂತರ ನಿರ್ದೇಶನ ನೀಡಿದೆ.

ಪ್ರಕರಣವೇನು?: ನಷ್ಟದಲ್ಲಿದೆ ಎಂಬ ಕಾರಣಕ್ಕೆ ಅಮಾನತ್ ಬ್ಯಾಂಕ್‌ ಅನ್ನು ರಿಸರ್ವ್‌ ಬ್ಯಾಂಕ್‌ 2013ರಲ್ಲಿ ವಹಿವಾಟು ನಡೆಸದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಲಂ 35 (ಎ) ಅಡಿಯಲ್ಲಿ ನಿರ್ಬಂಧಿಸಿತ್ತು.

ಬ್ಯಾಂಕ್‌ ರಾಜ್ಯದಾದ್ಯಂತ ಒಟ್ಟು 11 ಶಾಖೆಗಳನ್ನು ಹೊಂದಿದ್ದು ಇದರಲ್ಲಿ ಒಟ್ಟು 370 ನೌಕರರು ಉದ್ಯೋಗಿ

ಗಳಾಗಿದ್ದರು. ಏತನ್ಮಧ್ಯೆ ಬ್ಯಾಂಕ್‌ ಖಾತೆದಾ

ರರು ಠೇವಣಿ ವಾಪಸು ಕೋರಿ ಕೋರ್ಟ್ ಮೆಟ್ಟಿಲೇರಿದಾಗ ನ್ಯಾಯಪೀಠವು, ‘ಬ್ಯಾಂಕ್‌ ನಷ್ಟ ಸರಿದೂಗಿಸಲು ಕ್ರಮ ಕೈಗೊಳ್ಳಿ’ ಎಂದು ನಿರ್ದೇಶಿಸಿತ್ತು.

ಇದರ ಅನುಸಾರ ‘ಬ್ಯಾಂಕ್‌ ನೌಕರರು ಕೆಲಸ ಮಾಡದೆ ಸಂಬಳ ಪಡೆಯುತ್ತಿದ್ದಾರೆ’ ಎಂಬ ಕಾರಣಕ್ಕೆ, 25 ವರ್ಷ ದುಡಿದ ಹಾಗೂ 50 ವರ್ಷ ಮೀರಿದ ಸುಮಾರು 104 ಜನರು ಸ್ವಯಂ ನಿವೃತ್ತಿ ಪಡೆಯುವಂತೆ ಬ್ಯಾಂಕ್‌ ಆಡಳಿತ ಮಂಡಳಿ ಕ್ರಮ ಕೈಗೊಂಡಿತ್ತು.

ಈ 104ರ ಪೈಕಿ 35 ಜನರು ಹೈಕೋರ್ಟ್‌ ಮೆಟ್ಟಿಲೇರಿ, ‘ಪೂರ್ವ ಭಾವಿ ನೋಟಿಸ್ ನೀಡದೆ ತೆಗೆದು ಹಾಕಲಾಗಿದೆ’ ಎಂದು ಆಕ್ಷೇಪಿಸಿದ್ದರು.

ಇದೀಗ ನ್ಯಾಯಪೀಠವು, ‘2017ರ ಜೂನ್‌ 16ರಿಂದ ತಡೆಹಿಡಿಯಲಾಗಿರುವ ಸಂಬಳದ ಅರ್ಧದಷ್ಟನ್ನು ಪಾವತಿಸಿ’ ಎಂದು ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry