ನಲಪಾಡ್ ಜಾಮೀನು ಅರ್ಜಿ ತೀರ್ಪು ಇಂದು

7

ನಲಪಾಡ್ ಜಾಮೀನು ಅರ್ಜಿ ತೀರ್ಪು ಇಂದು

Published:
Updated:

ಬೆಂಗಳೂರು: ಜಾಮೀನು ಕೋಡೋಣ ಬಿಡಿ, ಏಕೆ ಹಟ ಸಾಧಿಸುತ್ತಿದ್ದೀರಿ, ದೋಷಾರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಜಾಮೀನು ಕೊಡಲು ಏನು ತೊಂದರೆ ಇದೆ, ತಂದೆಗೆ ಪ್ರಭಾವ ಇದ್ದರೆ ಮಗನಿಗೂ ಪ್ರಭಾವ ಇದೆ ಎಂದು ಹೇಗೆ ಹೇಳ್ತೀರಾ, ಆತ ಶಾಸಕರ ಪುತ್ರ ಎಂಬ ಕಾರಣಕ್ಕೆ ಈ ಪ್ರಕರಣ ಮಹತ್ವ ಪಡೆದಿದೆಯೇ...?

ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದ ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಶ್ಯಾಮಸುಂದರ್ ಅವರಿಗೆ ನ್ಯಾಯಮೂರ್ತಿ ಜಾನ್‌ ಮೈಕೆಲ್ ಕುನ್ಹ ಕೇಳಿದ ಪ್ರಶ್ನೆಗಳಿವು.

ಇವಕ್ಕೆ ಉತ್ತರಿಸಿದ ಶ್ಯಾಮಸುಂದರ್, ‘ಸ್ವಾಮಿ, ನಲಪಾಡ್ ತನ್ನ ಅಧಿಕಾರದ ದರ್ಪವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಲು ಹಿಟ್ಲರ್‌ನಂತೆ ವರ್ತಿಸಿದ್ದಾನೆ. ಆದ್ದರಿಂದಲೇ ಪ್ರಕರಣ ಮಹತ್ವ ಪಡೆದುಕೊಂಡಿದೆ. ಆತ ಶಾಸಕರೊಬ್ಬರ ಪುತ್ರ ಎಂಬ ಕಾರಣಕ್ಕೆ ಅಲ್ಲ’ ಎಂದು ಹೇಳಿದರು.

ಜಾಮೀನು ಕೋರಿ ಮೊಹಮದ್ ನಲಪಾಡ್ ಹ್ಯಾರಿಸ್‌ ಸಲ್ಲಿಸಿರುವ ಜಾಮೀನು ಅರ್ಜಿಯ ಮೇಲಿನ ವಿಚಾರಣೆಯನ್ನು ಬುಧವಾರ ಮುಕ್ತಯಗೊಳಿಸಿದ ನ್ಯಾಯಪೀಠ, ಗುರುವಾರ (ಜೂ.14) ಆದೇಶದ ಉಕ್ತಲೇಖನ ನೀಡಲಿದೆ.

ವಿಚಾರಣೆ ವೇಳೆ ನಲಪಾಡ್‌ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ, ‘ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಾರಾಕಾಸ್ತ್ರ ಬಳೆಯಾಗಿವೆ ಎಂದು ದೋಷಾರೋಪ ಪಟ್ಟಿಯಲ್ಲಿ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಇದು ಕೊಲೆ ಯತ್ನದ ಪ್ರಕರಣವಲ್ಲ. ಆರೋಪಿಗಳಿಗೆ ಕೊಲೆ ಮಾಡುವ ಉದ್ದೇಶವೂ ಇರಲಿಲ್ಲ’ ಎಂದರು.

‘ನಲಪಾಡ್ ಒಬ್ಬ ಉದ್ಯಮಿ. ಸ್ಥಳೀಯ ಶಾಸಕರ ಪುತ್ರನೂ ಹೌದು. ಆತ ತಲೆಮರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರಕರಣದಲ್ಲಿ 15 ಸಾಕ್ಷಿಗಳಿದ್ದು, ಎಲ್ಲರ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ನಂಬಲು ಆಗದು. ಇಲ್ಲಿಯವರಿಗೆ ನಲಪಾಡ್ ತಂದೆ ಯಾರೊಬ್ಬರ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry