ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ

7

ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ

Published:
Updated:

ಬೆಂಗಳೂರು: ಮುಂದೆ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಯುವಕರ ಗುಂಪೊಂದು ಕೆಎಸ್‌ಆರ್‌ಟಿ ಕನಕಪುರ ಡಿಪೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆಗೊಳಗಾಗಿರುವ ಬಸ್‌ ಚಾಲಕ ಗುರುರಾಜ್‌ ಕೆ.ಎನ್‌ ದೂರು ನೀಡಿದ್ದು, ಪ್ರಕಾಶ್‌, ದೀಪಕ್‌ ಮತ್ತಿತರರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ಇದೇ 10ರಂದು ರಾತ್ರಿ 8.10ರ ಸುಮಾರಿಗೆ ಕನಕಪುರದಿಂದ ಕಲಾಸಿಪಾಳ್ಯಕ್ಕೆ ಹೋಗುತ್ತಿದ್ದಾಗ ರಘುವನಹಳ್ಳಿ, ಅಡಿಗಾಸ್ ಹೋಟೆಲ್‌ ಬಳಿ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ದಾರಿ ಬಿಡುವಂತೆ ಜೋರಾಗಿ ಕೂಗುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಅವರು ಮುಂದೆ ಹೋಗಲು ದಾರಿ ಬಿಟ್ಟುಕೊಟ್ಟೆ. ಮುಂದೆ ಹೋದ ಅವರು ಅಡ್ಯಾರ್‌ ಆನಂದ ಭವನದ ಬಳಿ ಬಸ್‌ ಅಡ್ಡಹಾಕಿದರು. ದಾರಿ ಬಿಡುವುದಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು, ಸಮವಸ್ತ್ರ ಹರಿದು, ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry