ಸೈಕಲ್ ಬಳಕೆ ಯೋಜನೆ: ಪೊಲೀಸರಿಗೆ ಮಾಹಿತಿ

7

ಸೈಕಲ್ ಬಳಕೆ ಯೋಜನೆ: ಪೊಲೀಸರಿಗೆ ಮಾಹಿತಿ

Published:
Updated:

ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸೈಕಲ್ ಬಳಕೆ ಯೋಜನೆಯ ಭಾಗವಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯವು (ಡಿಯುಎಲ್‌ಟಿ) ಸಂಚಾರ ಪೊಲೀಸರಿಗಾಗಿ ಗುರುವಾರ ಕಾರ್ಯಾಗಾರ ಹಮ್ಮಿಕೊಂಡಿತ್ತು.

ನಗರದಲ್ಲಿರುವ 400 ವಾಹನ ನಿಲುಗಡೆ ಪ್ರದೇಶಗಳು ಮತ್ತು ಸಾರ್ಜನಿಕ ಸೈಕಲ್ ಬಳಕೆ ಯೋಜನೆಯ ಗಡಿ ಮತ್ತು ವ್ಯಾಪ್ತಿಗಳ ಕುರಿತು ಪಿಎಸ್‌ಐ ಮತ್ತು ಎಎಸ್‌ಐಗಳಿಗೆ ಮಾಹಿತಿ ನೀಡಲಾಯಿತು.

ಈ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ ಬಳಕೆದಾರರು ಭಾಗವಹಿಸುತ್ತಾರೆ ಎನ್ನುವ ನಿರೀಕ್ಷೆ ಇದ್ದು, ಅವರ ಸುರಕ್ಷತೆ ಬಗ್ಗೆಯೂ ಮಾಹಿತಿ ನೀಡಲಾಯಿತು.  ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌. ಹಿತೇಂದ್ರ ಮತ್ತು ಡಿಸಿಪಿ (ಸಂಚಾರ– ಪೂರ್ವ ವಿಭಾಗ) ಅನುಪಮ್‌ ಅಗರವಾಲ್‌ ಅವರಿಗೂ ಈಗಾಗಲೇ ಮಾಹಿತಿ ನೀಡಲಾಗಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಬಹುದು ಎಂದು ಪೊಲೀಸ್‌ ಅಧಿಕಾರಿಗಳ ಬಳಿ ಡಿಯುಎಲ್‌ಟಿ ವಿಶೇಷ ಅಧಿಕಾರಿ ಎನ್‌. ಮುರುಳಿ ಕೃಷ್ಣ  ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry