ಹೋರಾಟದಿಂದ ಸಮ ಸಮಾಜ ನಿರ್ಮಾಣ ಸಾಧ್ಯ:ಡಾ.ಬಿ.ಕೆ.ರವಿ

7

ಹೋರಾಟದಿಂದ ಸಮ ಸಮಾಜ ನಿರ್ಮಾಣ ಸಾಧ್ಯ:ಡಾ.ಬಿ.ಕೆ.ರವಿ

Published:
Updated:
ಹೋರಾಟದಿಂದ ಸಮ ಸಮಾಜ ನಿರ್ಮಾಣ ಸಾಧ್ಯ:ಡಾ.ಬಿ.ಕೆ.ರವಿ

ಬೆಂಗಳೂರು: ‘ದಮನಿತ ವರ್ಗಗಳು ಸಾಮಾಜಿಕ ನ್ಯಾಯ ಮತ್ತು ಸಮ ಸಮಾಜದ ಕನಸನ್ನು ಹೋರಾಟದಿಂದ ಮಾತ್ರ ನನಸಾಗಿಸಿಕೊಳ್ಳಲು ಸಾಧ್ಯ’ ಎಂದು ಬೆಂಗಳೂರು ವಿ.ವಿ ಕುಲಸಚಿವ ಡಾ.ಬಿ.ಕೆ.ರವಿ ಅಭಿಪ್ರಾಯಪಟ್ಟರು.

ನಗರದ ಸೆಂಟ್ರಲ್‌ ಕಾಲೇಜಿನಲ್ಲಿ ಸಮತಾ ಸೈನಿಕ ದಳ(ಎಸ್‌ಎಸ್‌ಡಿ), ಬೆಂಗಳೂರು ವಿ.ವಿ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟದ ಸಹಯೋಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ 134ನೇ ಜಯಂತಿ, ಡಾ.ಎಂ.ವೆಂಕಟಸ್ವಾಮಿ ಅವರ 64ನೇ ಹುಟ್ಟುಹಬ್ಬದ ನಿಮಿತ್ತ ಗುರುವಾರ ಆಯೋಜಿಸಿದ್ದ ಪರಿವರ್ತನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಶೋಷಿತ ವರ್ಗಗಳಿಗೆ ಮೀಸಲಾತಿ ಕುರಿತು ಜಾಗೃತಿ ಇರಲಿಲ್ಲ. ದಲಿತ ಹೋರಾಟಗಾರರು ದಮನಿತ ವರ್ಗಗಳನ್ನು ಎಚ್ಚರಿಸದೆ ಹೋಗಿದ್ದರೆ ಮೀಸಲಾತಿ ಕನಸಾಗಿಯೇ ಉಳಿಯುತ್ತಿತ್ತು. ಸಮ ಸಮಾಜದ ಚಿಂತನೆ ಹಾಗೂ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಅಂಬೇಡ್ಕರ್‌ ಅವರ ಪಾತ್ರ ಹಿರಿದು’ ಎಂದರು.

‘ಮಿಲ್ಲರ್ ಆಯೋಗವನ್ನು ಜಾರಿಗೊಳಿಸುವ ಮೂಲಕ ಸಮಾನತೆಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕೊಡುಗೆಗಳು ಚಿರಸ್ಮರಣೀಯ’ ಎಂದೂ ಅವರು ಹೇಳಿದರು.

‘ದಲಿತ ಸಮುದಾಯ ಆಳುವ ವರ್ಗವಾಗಬೇಕು. ಈಗಿನ ರಾಜಕೀಯ ಜಾತಿ ಧೃವೀಕರಣ ಹಾಗೂ ಹಣ ಬಲದ ಮೇಲೆ ನಿಂತಿರುವುದು ವಿಷಾದನೀಯ. ಅಸ್ಪೃಶ್ಯ ವರ್ಗದವರು ಮಂತ್ರಿಗಳಾದಾಗ ಮಾತ್ರ ಪರಿವರ್ತನೆ ಸಾಧ್ಯ’ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.

‘ದಲಿತರೆಲ್ಲ ಒಂದಾದರೆ ಸದಾಶಿವ ಆಯೋಗ ಜಾರಿಗೊಳಿಸುವುದು ಕಷ್ಟವಲ್ಲ ಎಂದರು.

ಬೆಳಿಗ್ಗೆ 10.30ಕ್ಕೆ ಟೌನ್‌ಹಾಲ್‌ನಿಂದ ಸೆಂಟ್ರಲ್‌ ಕಾಲೇಜಿನವರೆಗೂ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry