ಬಾಡಿಗೆ ವಂಚನೆ!

7

ಬಾಡಿಗೆ ವಂಚನೆ!

Published:
Updated:

ಬೆಂಗಳೂರು: ಗ್ರಾಹಕನೊಬ್ಬ ಸುಮಾರು 19 ದಿನಗಳ ಕಾಲ ಹೋಟೆಲ್‌ನ ರೂಂನಲ್ಲಿ ವಾಸ್ತವ್ಯ ಮಾಡಿ, ಬಾಡಿಗೆ ನೀಡದೆ ವಂಚನೆ ಮಾಡಿರುವ ಬಗ್ಗೆ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ರಾಡಿಸನ್‌ ಬ್ಲ್ಯೂ ಹೋಟೆಲ್‌ ಮಾಲೀಕ ಕೆ.ಬಿ.ಹರಿಹರನ್‌ ದೂರು ನೀಡಿದ್ದಾರೆ. ‘ಮಾರ್ಚ್‌ 3ರಂದು ಹೋಟೆಲ್‌ಗೆ ಬಂದಿದ್ದ ಮಂಗಳೂರಿನ ಕೊಡಿಯಾಲ ಬೈಲ್‌ ಸಮೀಪದ ನಿವಾಸಿ ದೇವರಾಯ ಹೆಗ್ಡೆ ಅವರಿಗೆ ಕೊಠಡಿ ಸಂಖ್ಯೆ 403ನ್ನು ನೀಡಲಾಗಿದ್ದು, ಸುಮಾರು 19 ದಿನಗಳ ಕಾಲ ತಂಗಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಮಾರ್ಚ್‌ 30ರಂದು ರೂಂ ಚೆಕ್‌ಔಟ್‌ ಮಾಡಿರುವ ಹೆಗ್ಡೆ, ಬಾಡಿಗೆ ಮೊತ್ತ ₹1,33ಲಕ್ಷ ಪಾವತಿಸದೆ ಹೋಟೆಲ್‌ನಿಂದ ಹೊರಟು ಹೋಗಿದ್ದಾರೆ. ಬಾಡಿಗೆ ನೀಡದೆ ವಂಚನೆ ಮಾಡಿರುವ ಅವರ ವಿರುದ್ಧ ಸೂಕ್ತ ಕಾನೂನು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry