ವೈದ್ಯಕೀಯ ಕ್ಷೇತ್ರದ ಸಮಗ್ರ ಮಾಹಿತಿ ಮೇಳ

5
ಬೆಂಗಳೂರು ಆರೋಗ್ಯ ಉತ್ಸವಕ್ಕೆ ಚಾಲನೆ

ವೈದ್ಯಕೀಯ ಕ್ಷೇತ್ರದ ಸಮಗ್ರ ಮಾಹಿತಿ ಮೇಳ

Published:
Updated:
ವೈದ್ಯಕೀಯ ಕ್ಷೇತ್ರದ ಸಮಗ್ರ ಮಾಹಿತಿ ಮೇಳ

ಬೆಂಗಳೂರು: ಬೆಂಗಳೂರು ಆರೋಗ್ಯ ಉತ್ಸವ ಗುರುವಾರ ಇಲ್ಲಿನ ಅರಮನೆ ಮೈದಾನದಲ್ಲಿ ಆರಂಭಗೊಂಡಿತು. ಟಿವಿ ಹೌಸ್ ನೆಟ್‌ವರ್ಕ್‌ ಸಂಸ್ಥೆ ಆಯೋಜಿಸಿದ 4 ದಿನಗಳ ಈ ಉತ್ಸವವನ್ನು ತುಮಕೂರಿನ ಸಿದ್ಧಾರ್ಥ ವಿಶ್ವವಿದ್ಯಾಲಯದ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು.

ಮೇಳದಲ್ಲೇನಿದೆ: ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ, ಯಂತ್ರಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಕಾಲೇಜುಗಳ ಮಾಹಿತಿ, ವಿವಿಧ ವೈದ್ಯಕೀಯ ಪದ್ಧತಿ ಕುರಿತ ಮಾಹಿತಿ ನೀಡುವ 60 ಸ್ಟಾಲ್‌ಗಳು ಇವೆ. ಮುಖ್ಯ ಸಭಾಂಗಣದಲ್ಲಿ ಆರೋಗ್ಯ ವಿಚಾರ ಸಂಬಂಧಿಸಿ ಸಂವಾದ, ಮನೋರಂಜನಾ ಕಾರ್ಯಕ್ರಮ ನಡೆದವು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಶೆಟ್ಟಿ, 'ಒಂದೊಂದು ವೈದ್ಯಕೀಯ ಕ್ಷೇತ್ರದವರು ಆರೋಗ್ಯ ಕುರಿತು ಒಂದೊಂದು ಸಲಹೆ ಕೊಡುತ್ತಾರೆ. ಆದರೆ, ಇಂಥ ಮೇಳಗಳಲ್ಲಿ ಎಲ್ಲ ವೈದ್ಯಕೀಯ ಪದ್ಧತಿ ಸಂಬಂಧಿತ ಪ್ರದರ್ಶನ ಇರುವುದರಿಂದ ಜನರು ಎಲ್ಲ ಬಗೆಯ ಮಾಹಿತಿ ಪಡೆದು ತಮಗೆ ಸರಿಯೆನಿಸಿದ್ದನ್ನು ಆಯ್ಕೆ ಮಾಡಬಹುದು' ಎಂದರು.

ವೈದ್ಯಕೀಯವು ಇನ್ನೂ ಸೇವಾ ಕ್ಷೇತ್ರವಾಗಿಯೇ ಉಳಿದಿದೆ. ಪೂರ್ಣ ಪ್ರಮಾಣದ ಉದ್ಯಮ ಅಗಿಲ್ಲ ಎಂದು ಹೇಳಿದರು.  ಮುಂದಿನ ಇಪ್ಪತ್ತು ವರ್ಷಗಳಲ್ಲಿ ವಿಜ್ಞಾನ ಆಧಾರಿತ ಆರೋಗ್ಯ ಕಾಳಜಿ ಬೆಳೆಯುತ್ತದೆ. ಜನ ಅದನ್ನು ಬಯಸುತ್ತಿದ್ದಾರೆ ಎಂದರು. ಆರೋಗ್ಯ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಡಾ.ನಾಗೇಂದ್ರ ಸ್ವಾಮಿ, ಸಂಘಟಕ ದೀಪಕ್‌ ತಿಮ್ಮಯ ಇದ್ದರು.

ವೀರ್ಯಪರೀಕ್ಷೆಗೆ ಸ್ಮಾರ್ಟ್‌ಫೋನ್ ಆಧಾರಿತ ಯಂತ್ರ 

ತಾವೇ ವೀರ್ಯಪರೀಕ್ಷೆ ಮಾಡಿಕೊಳ್ಳಬಹುದಾದ ಪುಟ್ಟ ಎಲೆಕ್ಟ್ರಾನಿಕ್‌ ಯಂತ್ರವನ್ನು ‘ಯೋ’ ಕಂಪನಿ ಅಭಿವೃದ್ಧಿಪಡಿಸಿದೆ. ₹ 2 ಸಾವಿರ ಬೆಲೆಯ ಈ ಯಂತ್ರವನ್ನು ಸ್ಯಾಮ್‌ಸಂಗ್‌ ಅಥವಾ ಐಫೋನ್‌ಗೆ ಜೋಡಿಸಬೇಕು. ಆ ಫೋನ್‌ನಲ್ಲಿ ಯೋ ಕಂಪನಿಯ ಆ್ಯಪ್‌ನ್ನು ಅಳವಡಿಸಿಕೊಂಡಿರಬೇಕು. ಯಂತ್ರಕ್ಕೆ ಅಳವಡಿಸಲಾದ ಗಾಜಿನ ಫಲಕಕ್ಕೆ ಒಂದೆರಡು ಹನಿ ವೀರ್ಯ ಹಾಕಿ ಹರಡಿಸಿ ಯಂತ್ರದೊಳಗೆ ಹಾಕಬೇಕು. ಸ್ಮಾರ್ಟ್‌ಫೋನ್‌ನಲ್ಲಿರುವ ಆ್ಯಪನ್ನು ಚಾಲನೆಗೊಳಿಸಿದರೆ ಫೋನ್‌ನ ಕ್ಯಾಮೆರಾ ಚಾಲನೆಗೊಳ್ಳುತ್ತದೆ. ಅದರಲ್ಲಿನ ಎಲ್‌ಇಡಿ ದೀಪ ಬೆಳಗುತ್ತದೆ. ಸ್ಮಾರ್ಟ್‌ಫೋನ್‌ ಸೂಕ್ಷ್ಮದರ್ಶಕದ ರೀತಿ ಕೆಲಸ ಮಾಡುತ್ತದೆ. ಫೋನ್‌ ಪರದೆಯ ಮೇಲೆ ವೀರ್ಯ ಚಲನೆಯ ಚಿತ್ರಗಳು ಮೂಡುತ್ತದೆ. ಈ ಚಿತ್ರವನ್ನು ತಜ್ಞರಿಗೆ ಕಳುಹಿಸಿ ವಿಶ್ಲೇಷಿಸಬಹುದು. ಇದರಿಂದ ಪ್ರಯೋಗಾಲಯಕ್ಕೆ ಹೋಗುವ, ಮುಜುಗರ ಅಥವಾ ಒತ್ತಡ ಅನುಭವಿಸುವ ಸಂದರ್ಭ ನಿವಾರಿಸಬಹುದು ಎಂದು ಕಂಪನಿಯ ಪ್ರತಿನಿಧಿಗಳು ಹೇಳಿದರು.

ಸ್ತ್ರೀಯರ ಸಮಸ್ಯೆಗಳು, ಐವಿಎಫ್‌ ತಂತ್ರಜ್ಞಾನ, ಮಧುಮೇಹ ಮತ್ತು ರಕ್ತದೊತ್ತಡ ಸಂಬಂಧಿತ ಮಾಹಿತಿ ಸ್ಟಾಲ್‌ಗಳೇ ಹೆಚ್ಚು ಸಂಖ್ಯೆಯಲ್ಲಿವೆ.

ಆರ್‌.ವಿ. ಡೆಂಟಲ್‌ ಕಾಲೇಜಿನಿಂದ ದಂತ ಚಿಕಿತ್ಸಾ ಕೇಂದ್ರದ ಪ್ರಾತ್ಯಕ್ಷಿಕೆ, ಮಣಿಪಾಲ ಆಸ್ಪತ್ರೆ ಸಮೂಹದ ಸಮಗ್ರ ಮಾಹಿತಿ ಕೇಂದ್ರ, ನಾರಾಯಣ ಹೃದಯಾಲಯದ ಕುರಿತ ಮಾಹಿತಿ ಕೇಂದ್ರ ಇದೆ.

* ಜನರೇ ದುಬಾರಿ ಔಷಧ, ಚಿಕಿತ್ಸಾ ವಿಧಾನ ಬಯಸುವಾಗ ವೈದ್ಯರೇನು ಮಾಡಲು ಸಾಧ್ಯ?

–ಡಾ.ಬಾಲಕೃಷ್ಣ ಶೆಟ್ಟಿ, ಸಿದ್ಧಾರ್ಥ ವಿವಿ ಕುಲಪತಿ ತುಮಕೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry