ಜಿ.ಟಿ. ದೇವೇಗೌಡರಿಗೆ ಅಬಕಾರಿ ಖಾತೆ

7

ಜಿ.ಟಿ. ದೇವೇಗೌಡರಿಗೆ ಅಬಕಾರಿ ಖಾತೆ

Published:
Updated:
ಜಿ.ಟಿ. ದೇವೇಗೌಡರಿಗೆ ಅಬಕಾರಿ ಖಾತೆ

ಬೆಂಗಳೂರು: ಉನ್ನತ ಶಿಕ್ಷಣ ಕೊಟ್ಟರೂ ‘ಆಯಕಟ್ಟಿನ’ ಖಾತೆ ಕೊಡಲಿಲ್ಲ ಎಂದು ಮುನಿಸಿಕೊಂಡು ಚೌಕಾಸಿ ನಡೆಸಿದ್ದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಕೊನೆಗೂ ಲಾಭದಾಯಕ ಇಲಾಖೆ ಎಂದೇ ಹೆಸರಾದ ಅಬಕಾರಿ ಖಾತೆ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಜತೆಗೆ ಸಹಕಾರ ಇಲಾಖೆ ವ್ಯಾಪ್ತಿಯಲ್ಲಿರುವ ಕೃಷಿ ಮಾರುಕಟ್ಟೆ ಇಲಾಖೆಯ ಹೆಚ್ಚುವರಿ ಹೊಣೆಯೂ ಅವರ ಹೆಗಲೇರಲಿದೆ.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಬಕಾರಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯನ್ನು ವಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕೊನೆಗೂ ಈ ಖಾತೆಗಳು ಸಿಕ್ಕಿರುವುದು ನನಗೆ ಸಂತಸ ತಂದಿದೆ’ ಎಂದು ದೇವೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದೇನೆ. ಸೋಮವಾರದ ಹೊತ್ತಿಗೆ ಖಾತೆ ಮರು ಹಂಚಿಕೆಯ ಅಧಿಕೃತ ಅಧಿ

ಸೂಚನೆ ಹೊರಬೀಳಲಿದೆ. ಆ ಬಳಿಕ ಖಾತೆ ವಹಿಸಿಕೊಳ್ಳುತ್ತೇನೆ’ ಎಂದು ಅವರು ತಿಳಿಸಿದರು.

ಖಾತೆ ಕ್ಯಾತೆ: ಹಿಂದಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದ ದೇವೇಗೌಡ ತಮಗೆ ‘ಬಲಿಷ್ಠ’ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದರು. ಲೋಕೋಪಯೋಗಿ, ಇಂಧನ, ಕಂದಾಯ ಅಥವಾ ಜಲಸಂಪನ್ಮೂಲ ಖಾತೆಯೇ ಬೇಕು ಎಂದು ಹಟ ಮಾಡಿದ್ದರು.

ಆದರೆ, ಕಂದಾಯ ಮತ್ತು ಜಲಸಂಪನ್ಮೂಲ ಖಾತೆಗಳು ಮೈತ್ರಿ ಕೂಟದ ಪಾಲುದಾರ ಪಕ್ಷ ಕಾಂಗ್ರೆಸ್‌ ಪಾಲಾಗಿತ್ತು.

ಜೆಡಿಎಸ್‌ಗೆ ದಕ್ಕಿದ್ದ ಲೋಕೋಪಯೋಗಿ ಹಾಗೂ ಇಂಧನ ಎರಡೂ ಖಾತೆಗಳೂ ತಮಗೇ ಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಣ್ಣ ಎಚ್.ಡಿ. ರೇವಣ್ಣ ದುಂಬಾಲು ಬಿದ್ದಿದ್ದರು. ಜೆಡಿಎಸ್‌ನ ಹಿರಿಯ ಶಾಸಕರೆಲ್ಲ ಒಗ್ಗೂಡಿ, ರೇವಣ್ಣ ಅವರಿಗೆ ಒಂದು ಖಾತೆಯನ್ನು ಮಾತ್ರ ನೀಡಬೇಕು ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದರು. ಈ ಬೆಳವಣಿಗೆಯಿಂದಾಗಿ ಇಂಧನ ಖಾತೆಯನ್ನು ಕುಮಾರಸ್ವಾಮಿ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

ಆಯಕಟ್ಟಿನ ಖಾತೆಗಳಿಗೆ ಜಿ.ಟಿ. ದೇವೇಗೌಡ ಹಾಗೂ ಸಿ.ಎಸ್‌. ಪುಟ್ಟರಾಜು ಲಾಬಿ ನಡೆಸಿದ್ದರಿಂದಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕ

ರಿಸಿ ಎರಡು ದಿನ ಕಳೆದರೂ ಖಾತೆ ಹಂಚಿಕೆಯಾಗಿರಲಿಲ್ಲ. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ್ದ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ, ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಹಾಗೂ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಹಂಚಿಕೆ ಮಾಡಲು ತೀರ್ಮಾನಿಸಿದ್ದರು. ಪುಟ್ಟರಾಜು ಮೊದಲು ಆಕ್ಷೇಪಿಸಿ

ದರೂ ಕೊನೆಗೆ ಒಪ್ಪಿಕೊಂಡಿದ್ದರು.

ಆದರೆ. ಜಿ.ಟಿ. ದೇವೇಗೌಡ ಸುತರಾಂ ಒಪ್ಪಿಕೊಂಡಿರಲಿಲ್ಲ. ವಿಧಾನಸೌಧದತ್ತ ಮುಖ ಹಾಕಿದರೂ ತಮಗೆ ಹಂಚಿಕೆಯಾದ ಕಚೇರಿಗೆ ಕಾಲಿಟ್ಟಿರಲಿಲ್ಲ. ಇದು ಜೆಡಿಎಸ್‌ ವರಿಷ್ಠರಿಗೆ ತಲೆ ನೋವು ತಂದಿತ್ತು.

ಬಂಡೆಪ್ಪ ಕಾಶೆಂಪೂರ ಅವರಿಗೆ ನೀಡಲಾಗಿದ್ದ ಸಹಕಾರ ಖಾತೆಯನ್ನು ನೀಡುವುದಾಗಿ ದೇವೇಗೌಡರಿಗೆ ತಿಳಿಸಲಾಗಿತ್ತು. ಆದರೆ, ‘ಸಹಕಾರ ಖಾತೆಯನ್ನು ಹಿಂದೆ ನಿಭಾಯಿಸಿದ್ದೇನೆ, ಹಿರಿಯರಾಗಿರುವ ಬಂಡೆಪ್ಪ ಅವರಿಗೆ ನೀಡಿರುವ ಖಾತೆಯನ್ನು ಕಿತ್ತು ಕೊಡುವುದು ಬೇಡ. ಎಂಟನೇ ತರಗತಿ ಉತ್ತೀರ್ಣರಾಗಿರುವುದರಿಂದ ಉನ್ನತ ಶಿಕ್ಷಣ ಇಲಾಖೆ ಮುನ್ನಡೆಸುವುದು ಕಷ್ಟ. ಬೇರೆ ಯಾವುದಾದರೂ ಖಾತೆ ನೀಡಿ’ ಎಂದು ಅವರು ಹಟ ಹಿಡಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry