‘ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ’

7

‘ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ’

Published:
Updated:

ಬೆಂಗಳೂರು: ‘ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ (ಆನುವಂಶಿಕ ಆಡಳಿತವಿರುವ ಸಂಸ್ಥೆ ಹೊರತುಪಡಿಸಿ) ರಚಿಸುವ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದೇನೆ’ ಎಂದು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹೇಳಿದರು.

‘ರಾಜ್ಯದ 34,556 ದೇಗುಲಗಳು ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ. ಅವುಗಳಿಂದ ಬರುವ ಆದಾಯಕ್ಕೆ ಅನುಗುಣವಾಗಿ ಎ,ಬಿ,ಸಿ ಎಂದು ವರ್ಗಾಯಿಸಲಾಗಿದೆ. ಹಿಂದೆ ಧಾರ್ಮಿಕ ಪರಿಷತ್ ರಚನೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು ನನ್ನ ಗಮನದಲ್ಲಿದೆ. ಈ ಕುರಿತು ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದ ಎಲ್ಲ ದೇವಾಲಯಗಳಿಂದ ವಾರ್ಷಿಕ ₹ 800 ಕೋಟಿ ಆದಾಯ ಬರುತ್ತಿದೆ.ಆಯಾ ದೇವಾಲಯಗಳ ಅಭಿವೃದ್ಧಿಗೇ ವಿನಿಯೋಗಿ ಸಲಾಗುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry