ಚಾಕು ತೋರಿಸಿ ಸರಗಳವು

7

ಚಾಕು ತೋರಿಸಿ ಸರಗಳವು

Published:
Updated:
ಚಾಕು ತೋರಿಸಿ ಸರಗಳವು

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಬಂದ ಸರಗಳ್ಳರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದೊಯ್ದ ಪ್ರಕರಣ ಕೊತ್ತನೂರು ಮುಖ್ಯ ರಸ್ತೆಯ ಕೃಷ್ಣ ನಗರದಲ್ಲಿ ನಡೆದಿದೆ.

ಈ ಕುರಿತು ಕೃಷ್ಣ ನಗರದ ನಿವಾಸಿ ರತ್ನಮ್ಮ ಅವರು ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ 13ರಂದು ಸಂಜೆ 5ರ ಸುಮಾರಿಗೆ ರತ್ಮಮ್ಮ ವಾಯು ವಿಹಾರಕ್ಕೆ ಹೋಗಿ, ಮರಳಿ ಬಂದು ಮನೆಯ ಗೇಟ್‌ ಮುಂದೆ ನಿಂತಿದ್ದರು.

ಮನೆಯ ಎದುರಿರುವ ರಸ್ತೆಯಲ್ಲಿ ಬೈಕ್‌ ನಿಲ್ಲಿಸಿದ ಇಬ್ಬರು ಅಪರಿಚಿತರು ರತ್ಮಮ್ಮ ಅವರ ಬಳಿ ಬಂದು ವಿಳಾಸ ಕೇಳುವ ನೆಪದಲ್ಲಿ ಚೀಟಿಯೊಂದನ್ನು ನೀಡಿದ್ದಾರೆ. ಚೀಟಿಯಲ್ಲಿ ಬರೆದ ವಿಳಾಸ ಓದುತ್ತಿದ್ದಾಗ ಅಪರಿಚಿತರು ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಳ್ಳಲು ಮುಂದಾಗಿದ್ದಾರೆ.

ಅಪರಿಚಿತರ ಕೃತ್ಯದಿಂದ ಗಾಬರಿಯಾದ ರತ್ನಮ್ಮ ಕೂಗಿಕೊಳ್ಳಲು ಮುಂದಾದಾಗ ಚಾಕು ತೋರಿಸಿ  ಅವರ ಬಾಯಿಮುಚ್ಚಿಸಿದ ಕಳ್ಳರು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ: ಬೈಕ್‌ನಲ್ಲಿ ಬಂದ ಸರಗಳ್ಳರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರ ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣ ಕಾವೇರಿ ನಗರದ ನ್ಯೂ ಪಿ.ಪಿ ಬಡಾವಣೆಯಲ್ಲಿ ನಡೆದಿದೆ.

ಈ ಬಗ್ಗೆ ಕೆಂಪೇಗೌಡ ಬಡಾವಣೆಯ ಶಾಂತಮ್ಮ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ‘ಇದೇ 14ರಂದು ರಾತ್ರಿ 9.30ರ ಸುಮಾರಿಗೆ ನ್ಯೂ ಪಿ.ಪಿ ಬಡಾವಣೆಯ 6ನೇ ಮುಖ್ಯರಸ್ತೆಯ ಜಂಕ್ಷನ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರಕರಣ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಬೈಕ್‌ನಲ್ಲಿ ಬಂದ ಅಪರಿಚಿತರು ಚಾಕು ತೋರಿಸಿ, ಬೆದರಿಕೆ ಹಾಕಿ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಎರಡೆಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ. ದೂರು ದಾಖಲಿಸಿಕೊಂಡಿರುವ  ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry