ಬಿನ್ನಿಪೇಟೆ ವಾರ್ಡ್‌ ಚುನಾವಣೆ ಇಂದು

7

ಬಿನ್ನಿಪೇಟೆ ವಾರ್ಡ್‌ ಚುನಾವಣೆ ಇಂದು

Published:
Updated:

ಬೆಂಗಳೂರು: ಬಿನ್ನಿಪೇಟೆ ಪ್ರದೇಶದ ಬಿಬಿಎಂಪಿ ವಾರ್ಡ್‌ – 121ರ ಉಪಚುನಾವಣೆ ಸೋಮವಾರ (ಜೂನ್‌ 18) ನಡೆಯಲಿದೆ.

ವಾರ್ಡ್‌ನ ಸದಸ್ಯರಾಗಿದ್ದ ಮಹದೇವಮ್ಮ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮಹದೇವಮ್ಮ ಅವರ ಪುತ್ರಿ ಐಶ್ವರ್ಯಾ ಬಿ.ಎನ್‌. (ಜೆಡಿಎಸ್‌), ಚಾಮುಂಡೇಶ್ವರಿ ಜಿ. (ಬಿಜೆಪಿ), ವಿದ್ಯಾ ಶಶಿಕುಮಾರ್‌ (ಕಾಂಗ್ರೆಸ್‌) ಕಣದಲ್ಲಿದ್ದಾರೆ.

ಮಹದೇವಮ್ಮ ಮೊದಲು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಈಗ ಐಶ್ವರ್ಯಾ ಅವರಿಗೆ ಟಿಕೆಟ್ ನೀಡದ ಕಾಂಗ್ರೆಸ್, ವಿದ್ಯಾ ಶಶಿಕುಮಾರ್‌ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಹೀಗಾಗಿ, ಐಶ್ವರ್ಯಾ ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಮುನಿಸನ್ನೇ ಬಿಜೆಪಿ ಬಂಡವಾಳವನ್ನಾಗಿಸಲು ಮುಂದಾಗಿದೆ.

18ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ವಾರ್ಡ್‌ನಲ್ಲಿ 37 ಮತಗಟ್ಟೆಗಳಿವೆ. ಇವುಗಳಲ್ಲಿ 30 ಸಾಮಾನ್ಯ ಮತ್ತು 7 ಸೂಕ್ಷ್ಮ ಮತಗಟ್ಟೆಗಳು. 17,746 ಪುರುಷರು, 16,826 ಮಹಿಳೆಯರು ಸೇರಿ ಒಟ್ಟು 34,572 ಮತದಾರರು ಇದ್ದಾರೆ. ನಗರದ ಹೋಂ ಸೈನ್ಸ್‌ ಕಾಲೇಜಿನಲ್ಲಿ ಜೂನ್ 20ರಂದು ಮತ ಎಣಿಕೆ ನಡೆಯಲಿದೆ ಎಂದು  ಚುನಾವಣಾಧಿಕಾರಿ ಎಚ್‌.ಎಸ್‌.ಸತೀಶ್‌ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭದ್ರತೆ:  ಮತದಾನ ಹಾಗೂ ಮತ ಎಣಿಕೆ ದಿನ ಕ್ಷೇತ್ರ ವ್ಯಾಪ್ತಿಯ ‌ಜಗಜೀವನ್‌ರಾಮನಗರ, ಮಾಗಡಿ ರಸ್ತೆ, ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry