ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್: 3ನೇ ಮಳಿಗೆ ಆರಂಭ

7

ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್: 3ನೇ ಮಳಿಗೆ ಆರಂಭ

Published:
Updated:
ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್: 3ನೇ ಮಳಿಗೆ ಆರಂಭ

ಬೆಂಗಳೂರು: ‘ವಿವಿಧ ಸಂಸ್ಕೃತಿಯ ಜನರಿಗೆ ಒಂದೇ ಸೂರಿನಡಿ ಎಲ್ಲ ಬಗೆಯ ದಿರಿಸು, ಶಾಪಿಂಗ್‌ ಅನುಭವ ಸಿಗುವುದು ಖುಷಿಯ ಸಂಗತಿ’ ಎಂದು ನಟ ಯಶ್‌ ಅವರು ಸಂತಸ ವ್ಯಕ್ತಪಡಿಸಿದರು.

ನಗರದ ವೈಟ್‌ಫೀಲ್ಡ್‌ನಲ್ಲಿ ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್‌ನ ಮೂರನೇ ಶೋರೂಮ್‌ ಉದ್ಘಾಟಿಸಿ ಅವರು ಮಾತನಾಡಿದರು. 

‘ಈಗಾಗಲೇ ಬನ್ನೇರುಘಟ್ಟ ಮತ್ತು ಬಸವನಗುಡಿಯಲ್ಲಿ ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್‌ಗಳಿವೆ. 3ನೇ ಶಾಪಿಂಗ್‌ ಮಾಲ್‌ ಆರಂಭಿಸಿರುವುದು ಖುಷಿಯ ಸಂಗತಿ. ವಿವಿಧ ಸಂಸ್ಕೃತಿ, ಸಂಪ್ರದಾಯದ ಜನರಿಗೆ ದಕ್ಷಿಣ ಭಾರತದ ಸಂಸ್ಕೃತಿಯನ್ನು ಬೆಂಗಳೂರಿನಲ್ಲಿಯೂ ಕಾಣುವುದು ಸುಲಭವಾಗಿದೆ. ಆದ್ದರಿಂದ ಇನ್ನೂ ಹೆಚ್ಚೆಚ್ಚು ಮಳಿಗೆಗಳು ಆರಂಭವಾಗಲಿ’ ಎಂದು ಅವರು ಶುಭ ಹಾರೈಸಿದರು.

‘ಒಂದು ಕುಟುಂಬಕ್ಕೆ ಬೇಕಾದ ಎಲ್ಲ ಬಗೆಯ ವಿವಿಧ ವಿನ್ಯಾಸದ ದಿರಿಸು, ವಸ್ತುಗಳ ಭಾರಿ ಸಂಗ್ರಹ ಇಲ್ಲಿದೆ. ಜನ ಇಷ್ಟಪಟ್ಟು ಖರೀದಿಸಲು ಮುಂದಾಗಲಿ’ ಎಂದು ನಟಿ ರಾಧಿಕಾ ಹೇಳಿದರು. 

‘ದಕ್ಷಿಣ ಭಾರತದ 3 ರಾಜ್ಯಗಳಲ್ಲಿ 17 ‌ಮಳಿಗೆಗಳನ್ನು ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್ ಹೊಂದಿದ್ದು, ಬೆಂಗಳೂರಿನ ಶಾಪಿಂಗ್‌ ಮಳಿಗೆಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ’ ಎಂದು ಮಳಿಗೆಯ ನಿರ್ದೇಶಕರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry