ಕಿಮ್ಸ್‌: ಒಪಿಡಿಯಲ್ಲಿ ಕೆಲಸ ಮಾಡಲಿರುವ ಸಿಬ್ಬಂದಿ

7
ಆಡಳಿತ ಮಂಡಳಿಯೊಂದಿಗೆ ನೌಕರರ ಸಂಘದ ಸಭೆ

ಕಿಮ್ಸ್‌: ಒಪಿಡಿಯಲ್ಲಿ ಕೆಲಸ ಮಾಡಲಿರುವ ಸಿಬ್ಬಂದಿ

Published:
Updated:

ಬೆಂಗಳೂರು: ಒಕ್ಕಲಿಗರ ಸಂಘದ ವಿವಿಧ ಸಂಸ್ಥೆಗಳ ನೌಕರರ ಒಕ್ಕೂಟ ಹಾಗೂ ಆಡಳಿತ ಮಂಡಳಿ ನಡುವೆ ನಡೆದ ಶಾಂತಿ ಸಭೆ ಬಹುತೇಕ ಯಶಸ್ವಿಯಾಗಿದೆ. ಇದರ ಫಲವಾಗಿ ಕಾಯಂ ನೌಕರರು ಒಪಿಡಿಯಲ್ಲಿ (ಹೊರರೋಗಿಗಳ ವಿಭಾಗ) ಕೆಲಸ ಮಾಡಲು ಒಪ್ಪಿದ್ದಾರೆ.

ಅಗತ್ಯಕ್ಕಿಂತ ಹೆಚ್ಚು ನೌಕರರನ್ನು ನೇಮಿಸಿಕೊಂಡಿರುವುದನ್ನು ವಿರೋಧಿಸಿ 18 ಸಂಸ್ಥೆಗಳ ಕಾಯಂ ನೌಕರರು ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಧಾನ ಸಭೆಯ ಬಳಿಕವೂ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

‘ಸೋಮವಾರ ಬೆಳಿಗ್ಗೆ, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬೆಟ್ಟೇಗೌಡ, ಕಾರ್ಯದರ್ಶಿ ನಾಗರಾಜು, ಖಜಾಂಚಿ ಕಾಳೇಗೌಡರ ನೇತೃತ್ವದಲ್ಲಿ ಸಭೆ ನಡೆಯಿತು. ಜೂನ್‌ 21ರಂದು ನಡೆಯವ ಕಾರ್ಯನಿರ್ವಾಹಕ ಮಂಡಳಿ ಸಭೆಯ ಬಳಿಕ ಅನಗತ್ಯ ನೇಮಕಾತಿಯನ್ನು ಕೈಬಿಡುವುದಾಗಿ ಬೆಟ್ಟೇಗೌಡ ಭರವಸೆ ನೀಡಿದ್ದಾರೆ. ನಾವು ಕೂಡ ಅವರ ಮನವಿಗೆ ಸ್ಪಂದಿಸುವುದಾಗಿ ಒಪ್ಪಿಕೊಂಡಿದ್ದೇವೆ’ ಎಂದು ನೌಕರರ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಹೇಳಿದರು.

‘ಸಭೆಯಲ್ಲಿ ಕೆಲವು ವಿಷಯಗಳ ಕುರಿತು ಒಮ್ಮತದ ನಿರ್ಧಾರ ಮಾಡಲಾಗಿಲ್ಲ. ಇದರಿಂದಾಗಿ ನಾವು ಪ್ರತಿಭಟನೆಯನ್ನು ಸಂಪೂರ್ಣವಾಗಿ ಕೈಬಿಡುವುದಿಲ್ಲ. ರೋಗಿಗಳಿಗೆ ತೊಂದರೆಯಾಗದಂತೆ ಜೂನ್‌ 21ರವರೆಗೆ ಆಸ್ಪತ್ರೆಯ ಕಾಯಂ ನೌಕರರು ಮಾತ್ರ ಒಪಿಡಿಯಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೆಲಸ ಮಾಡಲಿದ್ದಾರೆ. ಉಳಿದ ನೌಕರರು ಪ್ರತಿಭಟನೆ ಮುಂದುವರಿಸಲಿದ್ದಾರೆ’ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !