5 ಜಿ ಹೆಸರಿನಲ್ಲಿ ಸೈಬರ್ ವಂಚನೆ: ಬೆಂಗಳೂರಿನಲ್ಲಿ ಪೊಲೀಸರಿಂದ ಜಾಗೃತಿ

ಬೆಂಗಳೂರು: 4 ಜಿ ನೆಟ್‌ವರ್ಕ್‌ನಿಂದ 5 ಜಿ ನೆಟ್‌ವರ್ಕ್ ಬದಲಾವಣೆ ನೆಪದಲ್ಲಿ ಗ್ರಾಹಕರಿಗೆ ಕರೆ ಮಾಡುತ್ತಿರುವ ವಂಚಕರು, ವೈಯಕ್ತಿಕ ಮಾಹಿತಿ ಪಡೆದು ಹಣ ದೋಚುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವಂತೆ ನಗರದ ಪೊಲೀಸರು ಜನರದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ವಂಚನೆ ಜಾಲದ ಬಗ್ಗೆ ಸುದ್ದಿಗಾ ರರ ಜೊತೆ ಮಾತನಾಡಿದ ಸಿಸಿಬಿ ಡಿಸಿಪಿ ಶರಣಪ್ಪ, ‘ಏರ್‌ಟೆಲ್ ಹಾಗೂ ಇತರೆ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲಿ ವಂಚಕರು ಕರೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಕರೆಗಳ ಬಗ್ಗೆ ಜನರು ಜಾಗೃತಿ ವಹಿಸಬೇಕು. ನೆಟ್‌ವರ್ಕ್ ಬದಲಾವಣೆಗಾಗಿ ಮಾಹಿತಿ ಕೋರಿ ಯಾರಾದರೂ ಕರೆ ಮಾಡಿದರೆ, ಪೊಲೀಸ್ ನಿಯಂತ್ರಣ ಕೊಠಡಿ–112ಕ್ಕೆ ಕರೆ ಮಾಡಿ’ ಎಂದರು.
‘ವೈಯಕ್ತಿಕ ಮಾಹಿತಿ ಪಡೆಯುವ ವಂಚಕರು, ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (ಒನ್ ಟೈಂ ಪಾಸ್‌ವರ್ಡ್) ಕೇಳುತ್ತಿದ್ದಾರೆ. ಅದನ್ನು ನೀಡುತ್ತಿದ್ದಂತೆ, ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ವರ್ಗಾಯಿಸಿಕೊಂಡು ವಂಚಿಸುತ್ತಿರು
ವುದು ಗೊತ್ತಾಗಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.