ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ಕೋಮಾ ಕ್ಯಾನ್ಸರ್‌ ಜಾಗೃತಿಗಾಗಿ 5ಕೆ ವಾಕಥಾನ್

Published : 14 ಆಗಸ್ಟ್ 2024, 15:33 IST
Last Updated : 14 ಆಗಸ್ಟ್ 2024, 15:33 IST
ಫಾಲೋ ಮಾಡಿ
Comments

ಬೆಂಗಳೂರು: ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾದ ‘ಸಾರ್ಕೋಮಾ’ ಬಗ್ಗೆ ಜಾಗೃತಿ ಮೂಡಿಸಲು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ‘ಸಾರ್ಕೋಮಾ ಸ್ಟ್ರಾಂಗ್‌ ರೈಟ್‌ ಸ್ಟೆಪ್‌ ಫಸ್ಟ್‌ ಟೈಮ್‌’ ಶೀರ್ಷಿಕೆಯಡಿ 5ಕೆ ವಾಕಥಾನ್ ನಡೆಯಿತು.

ಮಂಗಳವಾರ ಬೆಳಿಗ್ಗೆ ಸೇಂಟ್‌ ಜೋಸೆಫ್ಸ್ ಮೈದಾನದಿಂದ ಕಬ್ಬನ್‌ಪಾರ್ಕ್‌, ವಿಧಾನಸೌಧದ ಸುತ್ತಮುತ್ತಲ ಪ್ರದೇಶದಲ್ಲಿ ನಡಿಗೆಯ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಯಿತು.

ಎಚ್‌ಸಿಜಿ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್ ಮಾತನಾಡಿ, ‘ಸಾರ್ಕೋಮಾ ಕ್ಯಾನ್ಸರ್‌ ಯಾವುದೇ ಗುಣಲಕ್ಷಣವಿಲ್ಲದೆ ಕಾಣಿಸಿಕೊಂಡು ಬಾಧಿಸುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ. ಈ ಕ್ಯಾನ್ಸರ್‌ನಿಂದ ಬದುಕುಳಿದವರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಕ್ಯಾನ್ಸರ್‌ ವಿರುದ್ಧ ಹೋರಾಡುವವರ ಜೊತೆ ನಾವಿದ್ದೇವೆ ಎಂಬ ಸಂದೇಶ ಸಾರಲು ಈ ವಾಕಥಾನ್‌ ನಡೆಸಲಾಯಿತು’ ಎಂದು ವಿವರಿಸಿದರು.

ನೌಕಾಪಡೆಯ ಅಧಿಕಾರಿ ಅರ್ನಾಲ್ಡ್ ರೆಗೊ, ಆರ್ಥೋಪೆಡಿಕ್ ಅಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಎಸ್. ಚಿಂದರ್, ಸಾರ್ಕೋಮಾ ಕ್ಯಾನ್ಸರ್‌ನಿಂದ ಬದುಕುಳಿದ ಪ್ರತೀಕ್ಷಾ, ಕ್ಯಾನ್ಸರ್‌ನಿಂದ ಬದುಕುಳಿದವರು, ಅವರ ಕುಟುಂಬಸ್ಥರು, ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT