ಸೋಮವಾರ, ಆಗಸ್ಟ್ 19, 2019
21 °C

ಲಿಂಗ ಜಾಗೃತಿ ಕಾರ್ಯಕ್ರಮ

Published:
Updated:

ಬೆಂಗಳೂರು: ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಬೆಂಳೂರು ವಿಶ್ವವಿದ್ಯಾಲಯ, ಬೆಂಗಳೂರು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಗೆ ಲಿಂಗ ಜಾಗೃತಿ ಬಗ್ಗೆ ಒಂದು ವಾರದ ಕಾರ್ಯಕ್ರಮ ಸೋಮವಾರ ಆರಂಭವಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್‌ ಪ್ರೊ.ಎಂ.ಜೆ.ವಿನೋದ್‍ ಮಾತನಾಡಿ, ಲಿಂಗ ಜಾಗೃತಿಯು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅತ್ಯಗತ್ಯ. ದೇಶದಲ್ಲಿ ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕವಾಗಿ ಲಿಂಗ ಸಮಾನತೆ ಅಗತ್ಯ ಎಂದರು.

ಯುಜಿಸಿ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕ ಪ್ರೊ.ಸಿ.ಶ್ರೀನಿವಾಸ್‍ ಮಾತನಾಡಿದರು.ಡಾ. ಅರುಣ್.ಎಸ್ ವೈದ್ಯ ವಂದಿಸಿದರು. 

 

Post Comments (+)