ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ: 731 ಸಂಸ್ಥೆಗಳು ನೋಂದಣಿ

ವೈಮಾನಿಕ ಪ್ರದರ್ಶನದ ಸಿದ್ಧತಾ ಸಭೆಯಲ್ಲಿ ರಾಜನಾಥ ಸಿಂಗ್‌
Last Updated 24 ಜನವರಿ 2023, 22:02 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಫೆಬ್ರುವರಿ 13ರಿಂದ 17ರ ವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಲು 731 ಸಂಸ್ಥೆಗಳು ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದರು.

ಮಂಗಳವಾರ ನಡೆದ ವೈಮಾನಿಕ ಪ್ರದರ್ಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘35 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ನಡೆಯಲಿರುವ ಈ ‍‌ಪ್ರದರ್ಶನದಲ್ಲಿ ಭಾರತದ ವೈಮಾನಿಕ ಕ್ಷೇತ್ರದ ಪರಾಕ್ರಮದ ಅರಿವು ಇಡೀ ಜಗತ್ತಿಗೆ ಆಗಲಿದೆ. ಸದೃಢ ಹಾಗೂ ಸ್ವಾವಲಂಬಿ ನವ ಭಾರತದ ಉದಯಕ್ಕೆ ಈ ಪ್ರದರ್ಶನ ವೇದಿಕೆ ಆಗಲಿದೆ’ ಎಂದರು.

‘ಇದೊಂದು ಕೇವಲ ಕಾರ್ಯಕ್ರಮವಲ್ಲ. ದೇಶದ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರಗಳ ಸಾಧನೆಗಳನ್ನು ಪ್ರತಿಬಿಂಬಿಸುವ ವೇದಿಕೆಯೂ ಆಗಲಿದೆ. ಪ್ರದರ್ಶನದಲ್ಲಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಇದು ಅತೀ ದೊಡ್ಡ ವೈಮಾನಿಕ ಪ್ರದರ್ಶನ ಆಗಲಿದೆ’ ಎಂದು ಅವರು ಹೇಳಿದರು.

ಭಾರತದ ರಕ್ಷಣಾ ಉದ್ಯಮವು ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆ ಆ ಬದಲಾವಣೆಗೆ ದೊಡ್ಡ ವೇಗವರ್ಧಕವಾಗಿದೆ ಎಂದೂ ಅವರು ಹೇಳಿದರು.

ವೈಮಾನಿಕ ಪ್ರದರ್ಶನದ ಮೂಲಕ ಇತರ ರಾಷ್ಟ್ರಗಳೊಂದಿಗೆ ದೇಶದ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

‘ಕರ್ನಾಟಕ ರಾಜ್ಯವು ಹಲವು ವರ್ಷಗಳಿಂದ ವೈಮಾನಿಕ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಇದು ಕರ್ನಾಟಕವನ್ನು ಏರೋಸ್ಪೇಸ್ ಉದ್ಯಮದ ಕೇಂದ್ರ ಬಿಂದುವನ್ನಾಗಿ ಪರಿವರ್ತಿಸುತ್ತಿದೆ. ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT