853 ಪಿಒಪಿ ಗಣೇಶ ಮೂರ್ತಿ ವಶ

7

853 ಪಿಒಪಿ ಗಣೇಶ ಮೂರ್ತಿ ವಶ

Published:
Updated:
Deccan Herald

ಬೆಂಗಳೂರು: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ವಿಗ್ರಹ ತಯಾರಿಸುತ್ತಿದ್ದ ನಾಲ್ಕು ಘಟಕಗಳಿಗೆ ದಾಳಿ ನಡೆಸಿ ಬೀಗಮುದ್ರೆ ಹಾಕಿರುವ ಬಿಬಿಎಂಪಿ ಅಧಿಕಾರಿಗಳು ಒಟ್ಟು 853 ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಸವನಗುಡಿ ಸಮೀಪ ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿ ಈ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ವಿನಾಯಕ ಆ್ಯಂಡ್‌ ಕಂಪನಿ, ಪ್ರಸನ್ನ ಗಣಪತಿ ಎಂಟರ್‌ಪ್ರೈಸಸ್‌, ವಿನಾಯಕ ಎಂಟರ್‌ಪ್ರೈಸಸ್‌, ತೀರ್ಥಗಿರಿ ಎಂಬ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ಮೂರ್ತಿಗಳನ್ನು ವಶಪಡಿಸಿಕೊಂಡ ಬಳಿಕ ಘಟಕಗಳಿಗೆ ಬೀಗಮುದ್ರೆ ಹಾಕಲಾಗಿದೆ. ಪಾಲಿಕೆಯ ಹಿರಿಯ ಪರಿಸರ ಅಧಿಕಾರಿ ಆರ್‌.ಗುರುಮೂರ್ತಿ, ಆರೋಗ್ಯಾಧಿಕಾರಿ ಡಾ.ಸಂಧ್ಯಾ, ಡಾ.ಭಾಗ್ಯ ದಾಳಿಯಲ್ಲಿ ಪಾಲ್ಗೊಂಡಿದ್ದರು. ಪಿಒಪಿಯಲ್ಲಿ ತಯಾರಿಸಿದ, ರಾಸಾಯನಿಕ ಬಣ್ಣಲೇಪಿತ ಗಣೇಶ ವಿಗ್ರಹಗಳನ್ನು ಯಾರೂ ಖರೀದಿಸಬಾರದು ಎಂದು ಪ್ರಕಟಣೆ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !