‘ಚಿತ್ರಕಲೆ ಸಮಾಜವನ್ನು‌ ಪ್ರತಿನಿಧಿಸುವ ಮಾಧ್ಯಮ’

7

‘ಚಿತ್ರಕಲೆ ಸಮಾಜವನ್ನು‌ ಪ್ರತಿನಿಧಿಸುವ ಮಾಧ್ಯಮ’

Published:
Updated:

ಬೆಂಗಳೂರು‌: ‘ಚಿತ್ರಗಳು ನಮ್ಮ ಸಂಸ್ಕೃತಿ, ಇತಿಹಾಸ, ನಾಗರಿಕತೆಯನ್ನು ಪ್ರತಿಬಿಂಬಿಸುತ್ತವೆ’ ಎಂದು ಉಪಮುಖ್ಯ ಮಂತ್ರಿ ಜಿ.ಪರಮೇಶ್ವರ ಹೇಳಿದರು.

ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಎಂ.ಎಸ್.ನಂಜುಂಡರಾವ್ ಅವರ 86ನೇ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಪ್ರತಿ ವರ್ಷ ನಡೆಯುವ ಚಿತ್ರ ಸಂತೆಯು ಅಂತರರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಉಲ್ಲೇಖವಾಗುವಂತೆ ಪ್ರಸಿದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮ ಜವಾಬ್ದಾರಿಯಾಗಲಿ’ ಎಂದರು. 

ಚಿತ್ರಕಲಾ ಮಹಾವಿದ್ಯಾಲಯದ ನೂತನ ಕ್ಯಾಂಪಸ್‌ಗೆ ಹಿಂದಿನ‌ ಸರ್ಕಾರ ₹20ಕೋಟಿ ಅನುದಾನ ನೀಡಿದೆ. ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು ಎಂದರು. 

ಪ್ರೊ.ದೇವರಾಜ್ ದಕ್ಕೋಜಿ ಅವರಿಗೆ  ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿಯನ್ನು ಪ್ರದಾನ‌ ಮಾಡಲಾಯಿತು.‌ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !