ಗುರುವಾರ , ಜೂನ್ 24, 2021
28 °C
ಜ್ವರ ಚಿಕಿತ್ಸಾಲಯಗಳಲ್ಲಿ ಒಂದೇ ದಿನ 5,969 ಮಂದಿ ತಪಾಸಣೆ

ಕೋವಿಡ್–19: 10 ದಿನಗಳಲ್ಲಿಯೇ ಗುಣಮುಖರಾದ 99 ವರ್ಷದ ಅಜ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿತ 99 ವರ್ಷದ ವೃದ್ಧೆಯೊಬ್ಬರು 10 ದಿನಗಳಲ್ಲಿಯೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣ ಮಲ್ಲೇಶ್ವರದ ನಿವಾಸಿ ಪಾರ್ವತಿಬಾಯಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಅಧಿಕ ರಕ್ತದೊತ್ತಡ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಆ.1ರಂದು ಸೋಂಕಿತರಾಗಿರುವುದು ದೃಢಪಟ್ಟ ಕಾರಣ ಮಲ್ಲೇಶ್ವರದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾದರು. ಅವರಿಗೆ ಮೊದಲ ದಿನ ಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್‌) ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸಿದ ಅವರು, ಆ.11ರಂದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

‘ಪಾರ್ವತಿಬಾಯಿ ಅವರಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಂಡೆವು. ಸೋಂಕು ಅವರ ಜೀವಕ್ಕೆ ಅಪಾಯ ಮಾಡುವ ಸಾಧ್ಯತೆಗಳಿದ್ದರಿಂದ ನಿರಂತರ ನಿಗಾ ಇಡಲಾಗಿತ್ತು. ಪೂರಕ ಚಿಕಿತ್ಸೆಯಿಂದ ಬೇಗ ಚೇತರಿಸಿಕೊಂಡರು. ಅವರು ಗುಣಮುಖರಾಗಿರುವುದು ನಮಗೆಲ್ಲ ಖುಷಿಯ ಜತೆಗೆ ಹೊಸ ಭರವಸೆಯನ್ನುಂಟು ಮಾಡಿದೆ’ ಎಂದು ಆಸ್ಪತ್ರೆಯ ಮೂತ್ರಪಿಂಡಶಾಸ್ತ್ರ ವಿಭಾಗದ ಸಲಹೆಗಾರ ಡಾ. ಜಿ.ಕೆ. ಪ್ರಕಾಶ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು