ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ ಎರಡು ದಿನದ ‘ಎಡ್ಯುವರ್ಸ್: ಪ್ರೀಮಿಯರ್ ಎಜುಕೇಶನ್ ಎಕ್ಸ್ಪೊ’ ಭಾನುವಾರ ತೆರೆಕಂಡಿತು. ಪೋಷಕರು, ವಿದ್ಯಾರ್ಥಿಗಳು ಅನುಮಾನ ಕಳೆದು, ಹೊಸ ಕನಸುಗಳನ್ನು ಹೊತ್ತು ತೆರಳಿದರು.

ಶನಿವಾರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾನುವಾರ ಪಾಲ್ಗೊಂಡಿದ್ದರು. ವಿವಿಧ ಕಾಲೇಜುಗಳಲ್ಲಿ ಇರುವ ಸೌಲಭ್ಯ, ಕೋರ್ಸ್ಗಳು, ಪ್ರವೇಶ ಶುಲ್ಕ, ಉದ್ಯೋಗಾವಕಾಶ, ಶೈಕ್ಷಣಿಕ ಸಾಲಗಳ ಬಗ್ಗೆ ಇದ್ದ ಪ್ರಶ್ನೆಗಳು, ಗೊಂದಲಗಳನ್ನು ಪರಿಹರಿಸಿಕೊಂಡರು. 70ಕ್ಕೂ ಅಧಿಕ ಮಳಿಗೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಮಾಹಿತಿಗಳನ್ನು ನೀಡಲಾಯಿತು.

ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ರೋಬೊಟಿಕ್ಸ್, ಪ್ರವಾಸೋದ್ಯಮ, ಎಂಬಿಎ, ಎಂಸಿಎ, ಫ್ಯಾಷನ್ ಡಿಸೈನಿಂಗ್, ಎಐ–ಎಂಎಸ್, ಸೈಬರ್ ಕ್ರೈಂ ಸೇರಿ ವಿವಿಧ ಕೋರ್ಸ್ಗಳು, ಕಾಲೇಜುಗಳ ವೈಶಿಷ್ಟ್ಯಗಳ ಬಗ್ಗೆ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳು ಮಾಹಿತಿ ಒದಗಿಸಿದರು.

ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕೋರ್ಸ್ ಹಾಗೂ ಸೌಲಭ್ಯಗಳ ಮಾಹಿತಿ ಒಳಗೊಂಡ ಕರಪತ್ರಗಳನ್ನು ಹಂಚಿದರು. ಕೆಲವು ಸಂಸ್ಥೆಗಳು ಮಾಹಿತಿ ಪರದೆಯನ್ನೂ ಅಳವಡಿಸಿದ್ದವು.

ಅಣಕು ಪರೀಕ್ಷೆ: ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ತಯಾರಿ ಮಟ್ಟ ಪರಿಶೀಲಿಸಿಕೊಳ್ಳಲು ಶನಿವಾರ ಅಣಕು ಸಿಇಟಿ ಪರೀಕ್ಷೆ ನಡೆದರೆ, ಭಾನುವಾರ ಅಣಕು ನೀಟ್ ನಡೆಯಿತು. ಅಣಕು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.