ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾನಿಯಂತ್ರಿತ ಮಾರುಕಟ್ಟೆ: ವಿಳಂಬಕ್ಕೆ ವಿವರಣೆ

Last Updated 12 ಜೂನ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಜಯನಗರದಲ್ಲಿ ನಿರ್ಮಿಸಲಾಗುತ್ತಿರುವ ಹವಾನಿಯಂತ್ರಿತ ಮಾರುಕಟ್ಟೆ ನಿರ್ಮಾಣ ವಿಳಂಬಕ್ಕೆ,ಜಲಮಂಡಳಿ ಪೈಪ್ ಮತ್ತುಬೆಸ್ಕಾಂ ಕೇಬಲ್ ಸ್ಥಳಾಂತರ ಪ್ರಮುಖ ಕಾರಣವಾಗಿದೆ’ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ಡಿ.ಹೇಮೇಶ್ ಬಾಬು ಸಲ್ಲಿಸಿರುವ ನ್ಯಾಯಾಂಗ ನಿಂದನೆಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಜಯನಗರ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಸ್.ವಸಂತ್ ಕುಮಾರ್, ಕಾಮಗಾರಿ ವಿಳಂಬಕ್ಕೆ ಬೇಷರತ್‌ಕ್ಷಮೆ ಯಾಚಿಸಿದರು.

‘ಜೂನ್ ಎರಡನೇ ವಾರದಲ್ಲಿ ಟೆಂಡರ್ ಅಂತಿಮಗೊಳಿಸಲಾಗುವುದು. ಯೋಜನೆಯಲ್ಲಿ 42 ಮಳಿಗೆ ನಿರ್ಮಿಸಲಾಗುವುದು’ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಪ್ರಮಾಣ ಪತ್ರವನ್ನುದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಮುಂದೂಡಿದೆ.

‘2019ರ ಮಾರ್ಚ್‌ 31ರೊಳಗೆ ಹವಾನಿಯಂತ್ರಿತ ಮಾರುಕಟ್ಟೆನಿರ್ಮಿಸಲಾಗುವುದು ಎಂದುಎಇಇ ಕಳೆದ ಡಿಸೆಂಬರ್‌ನಲ್ಲಿ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ ಇನ್ನೂ ನಿರ್ಮಾಣ ಪೂರ್ಣಗೊಂಡಿಲ್ಲ’ ಎಂಬುದು ಅರ್ಜಿದಾರರ ದೂರು.

ಅರ್ಜಿದಾರರ ಪರ ವಕೀಲಜಿ.ಆರ್. ಮೋಹನ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT