ಬೆಂಗಳೂರು: ‘ದಾನ, ಧರ್ಮ, ಸಂಕಷ್ಟದಲ್ಲಿರುವ ಕಡುಬಡವರ ಸೇವೆ ಮಾಡುವುದೇ ನಿಜವಾದ ಪುಣ್ಯದ ಕೆಲಸ’ ಎಂದು ಪುಲಕೇಶಿನಗರ ಕ್ಷೇತ್ರದ ಶಾಸಕ ಎ.ಸಿ. ಶ್ರೀನಿವಾಸ್ ಹೇಳಿದರು.

ರಂಜಾನ್ ಪ್ರಯುಕ್ತ ಡಿ.ಜೆ.ಹಳ್ಳಿಯಲ್ಲಿ ವೈಯಕ್ತಿಕವಾಗಿ ಹತ್ತು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಕ್ಷೇತ್ರದ ಜನರಿಗೆ ಸ್ವಲ್ಪ ಸಹಾಯ ಮಾಡಲಾಗುತ್ತಿದೆ. ಯುಗಾದಿ ಹಬ್ಬದಂದು ಹಿಂದೂಗಳಿಗೂ ಆಹಾರ ಕಿಟ್ಗಳನ್ನು ನೀಡಲಾಗುವುದು. ಇಲ್ಲಿ ಜಾತಿ, ಧರ್ಮ ಮುಖ್ಯವಲ್ಲ. ಜನರ ಸೇವೆ ಮಾಡುವುದೇ ನಿಜವಾದ ಧರ್ಮ. ನಾವೆಲ್ಲರೂ ಪ್ರೀತಿ, ಸ್ನೇಹ, ನಂಬಿಕೆಯಿಂದ ಕೂಡಿ ಬಾಳುವುದನ್ನು ಕಲಿತಾಗ ಮಾತ್ರ ಮಾನವ ಜನ್ಮ ಸಾರ್ಥಕ’ ಎಂದರು.

‘ಪುಲಕೇಶಿನಗರ ವ್ಯಾಪ್ತಿಯ ವಾರ್ಡ್ಗಳಲ್ಲಿ ತಲಾ ₹30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮತ್ತು ₹40 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿಯೇ ವಿಶೇಷ ಮತ್ತು ಶಾಸಕರ ಅನುದಾನದ ₹100 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಒಳಚರಂಡಿ ಕೈಗೊಳ್ಳಲಾಗುತ್ತಿದೆ’ ಎಂದರು.

ಮೌಲಾನಗಳಾದ ಜಲ್ಪಿಕರ್, ಆಸೀಫ್ ಮಾತನಾಡಿ ‘ಎಲ್ಲ ಧರ್ಮಗಳು ಶಾಂತಿಯನ್ನು ಬಯಸುತ್ತವೆ. ನಿರ್ಗತಿಕರು, ಶೋಷಿತರು, ಆರ್ಥಿಕ, ಸಾಮಾಜಿಕ, ಶೈಕ್ಷಿಣಿಕವಾಗಿ ಹಿಂದುಳಿದವರ ಸೇವೆಯನ್ನು ಯಾರು ಮಾಡುತ್ತಾರೆಯೋ ಅಲ್ಲಿ ಶಾಂತಿ ಮತ್ತು ಸೌಹಾರ್ದ ಕಾಣಬಹುದು’ ಎಂದರು.

ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಾಜೀದ್ ಸೇರಿದಂತೆ ಪಾಲಿಕೆ ಮಾಜಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.