ವಿಮ್ಸ್‌ ಆಡಳಿತಾಧಿಕಾರಿ ಬಳಿ 5 ನಿವೇಶನ, 1 ಮನೆ

7
ಪ್ರಜಾವಾಣಿ ವಾರ್ತೆ

ವಿಮ್ಸ್‌ ಆಡಳಿತಾಧಿಕಾರಿ ಬಳಿ 5 ನಿವೇಶನ, 1 ಮನೆ

Published:
Updated:

ಬೆಂಗಳೂರು: ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ದುರ್ಗಪ್ಪ ಅವರ ಬಳಿ ಐದು ನಿವೇಶನ, ಒಂದು ಮನೆ, ಚಿನ್ನಾಭರಣ ಹಾಗೂ ಭಾರಿ ಮೊತ್ತದ ಗೃಹ ಉಪಯೋಗಿ ವಸ್ತುಗಳು ಇರುವುದನ್ನು ಎಸಿಬಿ ಪತ್ತೆ ಹಚ್ಚಿದೆ. ಇವುಗಳಲ್ಲಿ ಎರಡು ನಿವೇಶನ ಅಭಿವೃದ್ಧಿ ಹಂತದಲ್ಲಿವೆ. 

ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದ ಮೇಲೆ ಕಪ್ಪಗಲ್‌ ರಸ್ತೆ ಬ್ರಹ್ಮಯ್ಯ ಕಾಲೋನಿಯ ದುರ್ಗಪ್ಪ ಅವರ ಮನೆ, ವಿಮ್ಸ್‌ನ ಅವರ ಕಚೇರಿ ಹಾಗೂ ಎಂ.ವಿ. ನಗರದಲ್ಲಿರುವ ತಂಗಿ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.

ಬ್ರಹ್ಮಯ್ಯ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಒಂದು ಮನೆ, ಎರಡು ನಿವೇಶನ, ಕಪ್ಪಗಲ್‌ ರಸ್ತೆ ಸದಾಶಿವನಗರದಲ್ಲಿ 1ನಿವೇಶನ, ‘ಸೃಷ್ಟಿ ಡೆವಲಪರ್ಸ್‌’ ಬೆಳಗಲ್‌ ರಸ್ತೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಲೇಔಟ್‌ನಲ್ಲಿ 2 ನಿವೇಶನಗಳಿವೆ.

ಅಲ್ಲದೆ, ಒಂದು ಕಾರು, ಎರಡು ದ್ವಿಚಕ್ರ ವಾಹನಗಳು, 1,587 ಗ್ರಾಂ ಚಿನ್ನ, 290 ಗ್ರಾಂ ಬೆಳ್ಳಿ, ₹ 8.5 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಹಾಗೂ ಬ್ಯಾಂಕಿನ ಖಾತೆಯಲ್ಲಿ ₹ 20 ಸಾವಿರ ಹಣ ಇದೆ. ತನಿಖೆ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !