ಶುಕ್ರವಾರ, ಡಿಸೆಂಬರ್ 3, 2021
20 °C

ಉದ್ದಿಮೆ ಪರವಾನಗಿಗೆ ಲಂಚ: ಇಬ್ಬರು ಗ್ರಾ.ಪಂ. ನೌಕರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೀನು ಮತ್ತು ಮಾಂಸದ ಅಂಗಡಿ ತೆರೆಯಲು ಉದ್ದಿಮೆ ಪರವಾನಗಿ ನೀಡಲು ₹ 3,500 ಲಂಚ ಪಡೆದ ಬೆಂಗಳೂರು ನಗರ ಜಿಲ್ಲೆಯ ಸೀಗೆಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಸುಬ್ರಮಣಿ ಮತ್ತು ಬಿಲ್‌ ಸಂಗ್ರಾಹಕ ಮಂಜುನಾಥ ಸಿ. ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.

ಕೆ. ದೊಮ್ಮಸಂದ್ರದಲ್ಲಿ ಮೀನು ಮತ್ತು ಮಾಂಸದ ಅಂಗಡಿ ತೆರೆಯಲು ಉದ್ದಿಮೆ ಪರವಾನಗಿ ಕೋರಿ ರಾಮಮೂರ್ತಿನಗರದ ನಿವಾಸಿಯೊಬ್ಬರು ಸೀಗೆಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಪರವಾನಗಿ ನೀಡಲು ₹ 1,500 ಶುಲ್ಕದ ಜತೆಗೆ ₹ 3,500 ಲಂಚಕ್ಕೆ ಕೊಡುವಂತೆ ಸುಬ್ರಮಣಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು.

ಬುಧವಾರ ಅರ್ಜಿದಾರರು ಗ್ರಾಮ ಪಂಚಾಯಿತಿಗೆ ಹೋದಾಗ ಸುಬ್ರಮಣಿ ಪರವಾಗಿ ಮಂಜುನಾಥ ಲಂಚದ ಹಣ ಪಡೆದರು. ತಕ್ಷಣ ದಾಳಿಮಾಡಿದ ಎಸಿಬಿ ಬೆಂಗಳೂರು ನಗರ ಘಟಕದ ಅಧಿಕಾರಿಗಳು, ಇಬ್ಬರನ್ನೂ ಬಂಧಿಸಿದರು ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು