ಬಸ್‌ ಆಟೊ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

ಶನಿವಾರ, ಜೂಲೈ 20, 2019
25 °C

ಬಸ್‌ ಆಟೊ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

Published:
Updated:

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 207ರ ವಿಶ್ವನಾಥಪುರ ಬಳಿ ಖಾಸಗಿ ಬಸ್‌ಗೆ ಆಟೊ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಸೀನಾ (35) ಜೊಯಿಯಾ (5) ಸಾಜಿಯಾ (8) ಸಾನಿಯಾ (17) ಮೃತ‍‍ಪಟ್ಟವರು. ಎಂಟು ಮಂದಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರು ಹೊಸಕೋಟೆ ತಾಲ್ಲೂಕು ಗಿಡ್ಡಪ್ಪನಹಳ್ಳಿ ಗ್ರಾಮದವರು. 

ಘಟನೆಗೆ ಗುಂಡಿ ಕಾರಣ: ಮೃತರು ಜಿಲ್ಲಾಡಳಿತ ಭವನದಲ್ಲಿ ‘ಅಧಾರ್ ಕಾರ್ಡ್’ ತಿದ್ದುಪಡಿಗಾಗಿ ಬೆಳಿಗ್ಗೆಯೇ ಆಟೊದಲ್ಲಿ ಬರುತ್ತಿದ್ದಾಗ ಚಾಲಕ ರಸ್ತೆ ಗುಂಡಿ ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳಾದ ಕೆ.ಸಿ.ಮಂಜುನಾಥ್ ಮತ್ತು ಎಸ್.ಪಿ ಮುನಿರಾಜು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !