ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ: 40ರಿಂದ 50 ವರ್ಷದೊಳಗಿನ ಚಾಲಕರಿಂದಲೇ ಹೆಚ್ಚು ಅಪಘಾತ

Last Updated 18 ಮೇ 2022, 3:15 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ತಿಂಗಳ ಅವಧಿಯಲ್ಲಿ ಕೆಎಸ್‌ಆರ್‌ಟಿಸಿಯ 80 ಬಸ್‌ ಅಪಘಾತಗಳಲ್ಲಿ ಹೆಚ್ಚಿನವು 40ರಿಂದ 50 ವರ್ಷ ವಯಸ್ಸಿನ ಚಾಲಕ ರಿಂದ ಸಂಭವಿಸಿದ್ದು, ನೌಕರರು ಎಚ್ಚರಿಕೆ ಯಿಂದ ಚಾಲನೆ ಮಾಡಬೇಕು ಎಂದು ನಿಗಮ ತಿಳಿಸಿದೆ.

ಅಪಘಾತ ನಿಯಂತ್ರಿಸುವ ಸಂಬಂಧ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ನಿಗಮದ ವ್ಯವವ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ಚಾಲನಾ ಸಿಬ್ಬಂದಿಗಳ ಜತೆ ಸಂವಾದ ನಡೆಸಿದರು.

ಜನವರಿಯಿಂದ ಏಪ್ರಿಲ್ ನಡುವೆ 80 ಮಾರಣಾಂತಿಕ ಅಪಘಾತ ಗಳು ವರದಿಯಾಗಿವೆ. ಶೇ 39ರಷ್ಟು ಅಪಘಾತಗಳು 40 ರಿಂದ 50 ವರ್ಷ ವಯಸ್ಸಿನ ಚಾಲಕರಿಂದಲೇ ಉಂಟಾಗಿವೆ‌. ಶೇ 23ರಷ್ಟು ಅಪಘಾತಗಳು 36 ರಿಂದ 40 ವರ್ಷ ವಯಸ್ಸಿನ ಚಾಲಕರಿಂದ ಉಂಟಾಗಿವೆ. ಸಾವು-ನೋವುಗಳ ಪ್ರಮಾಣ ವನ್ನು ಅವಲೋಕಿಸಿದಾಗ ಶೇ44 ಅಪಘಾತಗಳು ದ್ವಿಚಕ್ರ ವಾಹನಗಳು ಮತ್ತು ಶೇ19 ಅಪಘಾತಗಳು ಪಾದಚಾರಿ ಗಳು, ಶೇ27 ರಷ್ಟು ಅಪಘಾತಗಳು ಮಧ್ಯಾಹ್ನದ ಅವಧಿಯಲ್ಲಿ ಸಂಭವಿಸಿವೆ ಎಂದು ಕೆಎಸ್‌ಆರ್‌ಟಿಸಿ ಅವಲೋಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT