ಅಪಘಾತ: ಗುತ್ತಿಗೆದಾರ ಸೇರಿ ಇಬ್ಬರ ಸಾವು

7

ಅಪಘಾತ: ಗುತ್ತಿಗೆದಾರ ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಗುತ್ತಿಗೆದಾರ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಬಳ್ಳಾರಿ ರಸ್ತೆಯ ಹುಣಸಮಾರನಹಳ್ಳಿ ಬಳಿ ರಸ್ತೆಬದಿಯ ಬ್ಯಾರಿಕೇಡ್‌ಗೆ ಓಮ್ನಿ ವಾಹನ ಡಿಕ್ಕಿ ಹೊಡೆದಿದ್ದರಿಂದ ಚಾಲಕ ಗಿರೀಶ್‌ ಅಸುನೀಗಿದ್ದಾರೆ. ದೊಡ್ಡಸಣ್ಣೆ ಗ್ರಾಮದ ಅವರು, ಮನೆಗೆಲಸಕ್ಕೆ ಕಾರ್ಮಿಕರನ್ನು ನಿಯೋಜಿಸುವ ಗುತ್ತಿಗೆದಾರರಾಗಿದ್ದರು. ಕೆಲಸ ನಿಮಿತ್ತ ಭಾನುವಾರ ಬೆಳಿಗ್ಗೆ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

ತೀವ್ರ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ತೀರಿಕೊಂಡಿದ್ದಾರೆ ಎಂದು ಜಾಲಹಳ್ಳಿ ಸಂಚಾರ ಪೊಲೀಸರು ತಿಳಿಸಿದರು.

ಮತ್ತೊಂದು ಘಟನೆಯಲ್ಲಿ ಬಳ್ಳಾರಿ ರಸ್ತೆಯ ಬೆಟ್ಟದ ಹಲಸೂರು ವೃತ್ತದಲ್ಲಿ ವಾಹನ ಗುದ್ದಿದ್ದರಿಂದ ಪಾದಚಾರಿ ನರಸಿಂಹಮೂರ್ತಿ ಎಂಬುವರು ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿಯಾದ ಅವರು, ಟೈಲರ್‌ ಕೆಲಸ ಮಾಡುತ್ತಿದ್ದರು. ರಸ್ತೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !