‘ಮಂಗಳವಾರ ಬೆಳಿಗ್ಗೆ ಐಶ್ವರ್ಯಾಗೆ ಕರೆ ಮಾಡಿದ್ದ ನವ್ಯಶ್ರೀ, ‘ಮನೆ ಹಾಗೂ ಹೊರಗೆ ನೆಮ್ಮದಿ ಇಲ್ಲ’ ಎಂದು ಹೇಳಿಕೊಂಡಿದ್ದರು. ಇದರಿಂದ ಗಾಬರಿಗೊಂಡ ಐಶ್ವರ್ಯಾ ಅವರು ನವ್ಯಶ್ರೀ ಅವರ ಬಳಿಗೆ ಬಂದಿದ್ದರು. ಇಬ್ಬರೂ ಕಾರಿನಲ್ಲಿ ರಾಜರಾಜೇಶ್ವರಿ ನಗರಕ್ಕೆ ತೆರಳಿ, ಅಲ್ಲಿ ಟೀ ಸೇವಿಸಿದ್ದರು. ಸ್ನೇಹಿತ ಅನಿಲ್ ಸಹ ಸ್ಥಳಕ್ಕೆ ಬಂದಿದ್ದರು. ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ವಿಚಾರವನ್ನು ನವ್ಯಶ್ರೀ ಪ್ರಸ್ತಾಪಿಸಿದ್ದರು. ಪೊಲೀಸ್ ಠಾಣೆಗೆ ದೂರು ನೀಡುವಂತೆ ಸ್ನೇಹಿತ ಸಲಹೆ ನೀಡಿದ್ದರು. ನಂತರ, ನವ್ಯಶ್ರೀ ಅವರ ಮನೆಗೆ ಐಶ್ವರ್ಯಾ ಸಹ ಬಂದು ಅಲ್ಲೇ ಉಳಿದುಕೊಂಡಿದ್ದರು. ಇವರು ಬರುವುದಕ್ಕೂ ಮೊದಲೇ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ ಗಾಢ ನಿದ್ರೆಯಲ್ಲಿದ್ದರು. ಇಬ್ಬರೂ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರು. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕೊಠಡಿಗೆ ನುಗ್ಗಿದ ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.