ಶನಿವಾರ, ಡಿಸೆಂಬರ್ 14, 2019
25 °C

ಪೊಲೀಸ್ ಸಿಬ್ಬಂದಿಗೆ ಚಾಕು ಹಾಕಿದ ಆರೋಪಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಎರಡು ದಿನಗಳ ಹಿಂದೆ ಆರ್.ಟಿ. ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೆಬಲ್ ಮತ್ತು ಕಾನ್ ಸ್ಟೆಬಲ್ ಗೆ ಚಾಕುವಿನಿಂದ ಇರಿದ ದುಷ್ಕರ್ಮಿಯನ್ನು  ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಗುಂಡೇಟು ತಿಂದ ಆರೋಪಿಯನ್ನು ಮರ್ಧಾನ್ ಖಾನ್ ಎಂದು ಗುರುತಿಸಲಾಗಿದೆ.

ಈತ ಎರಡು ದಿನಗಳ ಹಿಂದೆ ಈತ ನಗರದಲ್ಲಿ ಗಲಾಟೆ ಮಾಡಿದ್ದನು. ಆತನನ್ನು ಹಿಡಿಯಲು ಹೋದಾಗ ಹೆಡ್ ಕಾನ್ ಸ್ಟೆಬಲ್  ನಾಗರಾಜು ಅವರಿಗೆ ಚಾಕು ಹಾಕಿ ಈತ ಪರಾರಿಯಾಗಿದ್ದ. ಈ ಪ್ರಕರಣದ ಸಂಬಂಧ ಪೊಲೀಸರು ಆರೋಪಿಯ ಬೆನ್ನು ಬಿದ್ದಿದ್ದರು.

ಸೋಮವಾರ ನಸುಕಿನ 4 ಗಂಟೆ ಸುಮಾರಿಗೆ ಆರೋಪಿಯನ್ನು ಹಿಡಿಯಲು ಪೊಲೀಸರು ಹೋದಾಗ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಇನ್ ಸ್ಪೆಕ್ಟರ್ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರ್.ಟಿ ನಗರ ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ ಅವರು ಗುಂಡು ಹಾರಿಸಿದ್ದಾರೆ.

ಆರೋಪಿಯ ಕಾಲಿಗೆ ಎರಡು ಗುಂಡು ಬಿದ್ದಿದ್ದು, ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು