ನಟ ಯಶ್‌ ಪಾಲಾದ ‘8055’ ನೋಂದಣಿ ಸಂಖ್ಯೆ

7

ನಟ ಯಶ್‌ ಪಾಲಾದ ‘8055’ ನೋಂದಣಿ ಸಂಖ್ಯೆ

Published:
Updated:

ಬೆಂಗಳೂರು: ಇತ್ತೀಚೆಗಷ್ಟೇ ಮರ್ಸಿಡಿಸ್ ಬೆಂಜ್ ಕಾರು ಖರೀದಿಸಿದ್ದ ನಟ ಯಶ್‌, ‘ಕೆಎ 05 ಎಂವೈ 8055’ ನೋಂದಣಿ ಸಂಖ್ಯೆಯನ್ನು ₹72 ಸಾವಿರ ಕೊಟ್ಟು ಖರೀದಿಸಿದ್ದಾರೆ.

ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆಯ ಕಚೇರಿಯಲ್ಲಿ ‘ಕೆಎ 05 ಎಂವೈ’ ಸರಣಿಯ ಫ್ಯಾನ್ಸಿ ನಂಬರ್‌ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು.

ಯಶ್ ಪರವಾಗಿ ಹರಾಜಿನಲ್ಲಿ ಪಾಲ್ಗೊಂಡಿದ್ದ ರಾಕೇಶ್ ಎಂಬುವವರು ‘8055’ ಸಂಖ್ಯೆಯನ್ನು ಕೊಂಡುಕೊಂಡರು. ಹಣ ಎಷ್ಟಾದರೂ ಪರವಾಗಿಲ್ಲ, 8055 ನೋಂದಣಿ ಸಂಖ್ಯೆಯನ್ನು ಪಡೆಯುವಂತೆ ಯಶ್‌, ರಾಕೇಶ್‌ಗೆ ಹೇಳಿದ್ದರು ಎಂದು ಗೊತ್ತಾಗಿದೆ.

ಇದೇ ಹರಾಜು ಪ್ರಕ್ರಿಯೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ರೆಡ್ಡಿಯವರ ಮಗ ಸ್ವರೂಪ್, ₹3.51 ಲಕ್ಷ ಕೊಟ್ಟು ‘9999’ ನೋಂದಣಿ ಸಂಖ್ಯೆ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಉದ್ಯಮಿ, ‘9000’ ಸಂಖ್ಯೆಯನ್ನು ₹2.10 ಲಕ್ಷಕ್ಕೆ ಖರೀದಿಸಿದ್ದಾರೆ. ‘1‘ ಸಂಖ್ಯೆಯು ₹2.11 ಲಕ್ಷ ಹಾಗೂ ’666‘ ಸಂಖ್ಯೆಯು ₹1 ಲಕ್ಷಕ್ಕೆ  ಮಾರಾಟ ಆಗಿವೆ.

‘ಹರಾಜಿನಲ್ಲಿ ಇಲಾಖೆಯ ಬೊಕ್ಕಸಕ್ಕೆ ₹40.50 ಲಕ್ಷ ಆದಾಯ ಬಂದಿದೆ’ ಎಂದು ಸಾರಿಗೆ ಇಲಾಖೆಯ ಉಪ ಆಯುಕ್ತ ನಾರಾಯಣ ಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 38

  Happy
 • 9

  Amused
 • 4

  Sad
 • 4

  Frustrated
 • 7

  Angry

Comments:

0 comments

Write the first review for this !