ಬೆಂಗಳೂರು: ಸಾಂಪ್ರದಾಯಿಕ ಉಡುಪುಗಳು ಹಾಗೂ ಸೀರೆಗಳ ವೈವಿಧ್ಯಕ್ಕೆ ಭಾರತದಲ್ಲಿ ಮನೆಮಾತಾಗಿರುವ 'ಅವಂತ್ರ', ಈ ವರ್ಷದ ಬಹುನಿರೀಕ್ಷಿತ ʼದಿ ಗುಲಿಸ್ತಾನ್ ಎಡಿಟ್ʼ ಸಂಗ್ರಹವನ್ನು ಅನಾವರಣಗೊಳಿಸಿದೆ.

ಮಹಾದೇವಪುರದ ಫೀನಿಕ್ಸ್ ಮಾರ್ಕೆಟ್ಸಿಟಿಯಲ್ಲಿರುವ 'ಅವಂತ್ರ' (AVANTRA) ಮಳಿಗೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ, ಬ್ರ್ಯಾಂಡ್ ರಾಯಭಾರಿ ಹಾಗೂ ಸ್ಯಾಂಡಲ್ವುಡ್ ನಟಿ ರುಕ್ಮಿಣಿ ವಸಂತ್ ಅವರು ನೂತನ 'ಗುಲಿಸ್ತಾನ್ ಎಡಿಟ್' ಸಾಂಪ್ರದಾಯಿಕ ಉಡುಪುಗಳ ಶ್ರೇಣಿಯನ್ನು ಅನಾವರಣಗೊಳಿಸಿದರು.

ಭಾರತೀಯ ಸಾಂಪ್ರದಾಯಿಕ ಉಡುಪುಗಳು ನಮ್ಮ ಸಂಸ್ಕೃತಿ ಮತ್ತು ಗುರುತಿನ ಸಂಕೇತವಾಗಿವೆ. 'ಗುಲಿಸ್ತಾನ್ ಎಡಿಟ್' ಸರಣಿಯ ಹೂವಿನ ವಿನ್ಯಾಸ ಮತ್ತು ಜಾಲರಿ ಕೆತ್ತನೆಯ ಶೈಲಿ ನನ್ನನ್ನು ತುಂಬಾ ಆಕರ್ಷಿಸಿದೆ. ಅವಂತ್ರ ಬ್ರ್ಯಾಂಡ್ ಜೊತೆ ಗುರುತಿಸಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ನಟಿ ರುಕ್ಮಿಣಿ ವಸಂತ್ ಹೇಳಿದ್ದಾರೆ.

ಇದು ದೇಶದ 50ಕ್ಕೂ ಹೆಚ್ಚು ವೈವಿಧ್ಯಮಯ ಸಾಂಪ್ರದಾಯಿಕ ನೇಯ್ಗೆ ಕಲೆಗಳನ್ನು ಒಂದೆಡೆ ಪರಿಚಯಿಸುವ ಪ್ರಮುಖ ರೀಟೇಲ್ ಮಳಿಗೆಯಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಗ್ರಾಹಕರಿಗೆ ಇಲ್ಲಿ ಸೀರೆಗಳು ಮತ್ತು ಕುರ್ತಾಗಳ ಜೊತೆಗೆ ಬ್ಲೌಸ್ ಕಸ್ಟಮೈಸೇಷನ್, ಇನ್-ಸ್ಟೋರ್ ಸ್ಟೈಲಿಂಗ್ ನೆರವು ಹಾಗೂ ಪರಿಣತರಿಂದ ಸೀರೆ ಉಡಿಸುವ ಹೈಬ್ರಿಡ್ ಶಾಪಿಂಗ್ ಸೌಲಭ್ಯ ಲಭ್ಯವಿದೆ ಎಂದಿದ್ದಾರೆ.

ಭಾರತದ ಅದ್ಭುತ ನೇಯ್ಗೆ ಕಲೆಗೆ ಗೌರವ ಸಲ್ಲಿಸುವ ಸಲುವಾಗಿ ಈ ಪರಿಕಲ್ಪನೆಯಡಿ ಈ ನೂತನ ಕಲೆಕ್ಷನ್ ಪರಿಚಯಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.