ಬೆಂಗಳೂರು: ಮಾಂಡೋತ್ ಸ್ಟೀಲ್ ಕಂಪನಿಯು ‘ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ’ ಯೋಜನೆ ಅಡಿಯಲ್ಲಿ ನಗರದ 300 ಕ್ಷಯ ರೋಗಿಗಳನ್ನು ಶನಿವಾರ ದತ್ತು ಪಡೆದಿದೆ.

ಕ್ಷಯ ರೋಗಿಗಳಿಗೆ ಸರ್ಕಾರ ಉಚಿತ ಚಿಕಿತ್ಸೆ, ಔಷಧಿ ಮತ್ತು ಆರು ತಿಂಗಳ ಕಾಲ ಪ್ರತಿ ತಿಂಗಳಿಗೆ ₹ 500 ನೆರವು ನೀಡುತ್ತಿದೆ. ಆದರೆ, ಪೌಷ್ಟಿಕ ಆಹಾರ ಪಡೆದು ಬೇಗ ಗುಣಮುಖರಾಗಲು ನೆರವಾಗುವುದಕ್ಕೆ ‘ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ’ ಯೋಜನೆಯಡಿ ಕ್ಷಯ ರೋಗಿಗಳನ್ನು ದತ್ತು ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು.

2022ರ ನವೆಂಬರ್ 25ರಂದು 500 ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ, ಕ್ಷಯ ರೋಗಿಗಳ ನೆರವಿಗೆ ನಿಲ್ಲುವಂತೆ ಇತರರಿಗೂ ಮನವಿ ಮಾಡಿದ್ದರು. ಅವರ ನೇತೃತ್ವದಲ್ಲೇ ರಂಕಾ ಸ್ಟೀಲ್ಸ್ ಕಂಪನಿಯು ಇತ್ತೀಚೆಗೆ 300 ರೋಗಿಗಳನ್ನು ದತ್ತು ಪಡೆದಿತ್ತು.

ಮಾಂಡೋತ್ ಸ್ಟೀಲ್ಸ್ ಕಂಪನಿ ಕೂಡ ಲಹರ್ ಸಿಂಗ್ ಮನವಿಯಂತೆ 300 ರೋಗಿಗಳನ್ನು ದತ್ತು ಪಡೆದಿದೆ. ಮಲ್ಲೇಶ್ವರದ ರೋಟರಿ ಕ್ಲಬ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 300 ಮಂದಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಲಹರ್ ಸಿಂಗ್ ಮತ್ತು ಲಲಿತ್ ಕುಮಾರ್ ಮಾಂಡೋತ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಅಶ್ವತ್ಥ ನಾರಾಯಣ ಮಾತನಾಡಿ, ‘ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿ ಇರಿಸಿಕೊಳ್ಳುವುದು ಮುಖ್ಯ. ಲಹರ್ ಸಿಂಗ್ ಅವರು ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿ ಕ್ಷಯ ರೋಗಿಗಳಿಗೆ ನೆರವು ನೀಡಲು ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಸಮಾಜವು ಕೈಜೋಡಿಸಿದರೆ ಕ್ಷಯವನ್ನು ಭಾರತದಿಂದಲೇ ನಿರ್ಮೂಲನೆ ಮಾಡಬಹುದು’ ಎಂದರು.

ಲಹರ್ ಸಿಂಗ್ ಮಾತನಾಡಿ, ‘ಪ್ರಧಾನಿಯವರ ಮನವಿಯಂತೆ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೇನೆ. ಆರಂಭದಲ್ಲಿ ನಾನೇ 500 ರೋಗಿಗಳನ್ನು ದತ್ತು ಪಡೆದಿದ್ದೆ. ಈಗ ಒಟ್ಟು 1,100 ರೋಗಿಗಳಿಗೆ ನೆರವಿನ ವ್ಯವಸ್ಥೆ ಆಗಿದೆ. ಕ್ಷಯ ರೋಗಿಗಳ ಅನುಕೂಲಕ್ಕಾಗಿಯೇ ಬಿಬಿಎಂಪಿಯ ಬಾಬು ಜಗಜೀವನ್ ರಾಂ ಆಸ್ಪತ್ರೆಗೆ ಎಕ್ಸ್ರೇ ಮತ್ತು ಇತರ ಯಂತ್ರೋಪಕರಣ ಖರೀದಿಗೆ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 50 ಲಕ್ಷ ಅನುದಾನ ನೀಡಿದ್ದೇನೆ’ ಎಂದರು.

ರಾಷ್ಟ್ರೀಯ ಕ್ಷಯ ರೋಗ ಸಂಸ್ಥೆ ನಿರ್ದೇಶಕ ಡಾ.ಎನ್. ಸೋಮಶೇಖರ್, ರಾಜ್ಯದ ಉಪ ನಿರ್ದೇಶಕ ಡಾ. ಅನ್ಸಾರ್ ಅಹಮ್ಮದ್, ರಾಜ್ಯ ಕ್ಷಯ ರೋಗ ನಿವಾರಣಾ ಸಂಸ್ಥೆ ಉಪ ನಿರ್ದೇಶಕ ಡಾ. ಅನಿಲ್ ಕುಮಾರ್, ಜಿಲ್ಲಾ ಕ್ಷಯ ರೋಗ ನಿವಾರಣಾ ಅಧಿಕಾರಿ ಡಾ. ಕಲ್ಪನಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.