ಜಾಹೀರಾತು: ವಿವರಣೆ ಕೇಳಿದ ಹೈಕೋರ್ಟ್‌

7

ಜಾಹೀರಾತು: ವಿವರಣೆ ಕೇಳಿದ ಹೈಕೋರ್ಟ್‌

Published:
Updated:

ಬೆಂಗಳೂರು: ‘ಜಾಹೀರಾತು ನಿಷೇಧ ಕೇವಲ ಅನಧಿಕೃತ ಫಲಕಗಳಿಗೆ ಅನ್ವಯವಾಗುತ್ತದೆಯೇ ಅಥವಾ ಈಗಾಗಲೇ ಪರವಾನಗಿ ಪಡೆದಿರುವ ಜಾಹೀರಾತು ಫಲಕಗಳಿಗೂ ಅನ್ವಯವಾಗುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಸೂಚಿಸಿದೆ.

‘ಫ್ಲೆಕ್ಸ್, ಬ್ಯಾನರ್ ಸೇರಿದಂತೆ ಎಲ್ಲ ಮಾದರಿಯ ಜಾಹೀರಾತು ಫಲಕಗಳ ಅಳವಡಿಕೆಯನ್ನು ಒಂದು ವರ್ಷ ನಿಷೇಧಿಸಿ ಬಿಬಿಎಂಪಿ ಕೈಗೊಂಡಿರುವ ನಿರ್ಣಯ ರದ್ದುಪಡಿಸಬೇಕು’ ಎಂದು ಕೋರಿ ಮೆಸರ್ಸ್ ಪಾಪ್ಯುಲರ್ ಅಡ್ವರ್ಟೈಸರ್ಸ್‌ ಸೇರಿದಂತೆ 11 ಜಾಹೀರಾತು ಏಜೆನ್ಸಿಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘2016ರಿಂದ ನಗರದಲ್ಲಿ ಹೊಸ ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ನೀಡಿಲ್ಲ. ಈ ಹಿಂದೆ ನೀಡಿದ್ದ ಪರವಾನಗಿಯನ್ನೂ ನವೀಕರಿಸಿಲ್ಲ. ಹಾಗಾಗಿ ಈಗಿರುವ ಎಲ್ಲವೂ ಜಾಹೀರಾತು ಫಲಕಗಳು ಅನಧಿಕೃತ ಎನಿಸಲಿವೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಜಾಹೀರಾತು ಅಳವಡಿಕೆ ಕುರಿತ ನಿಯಮ ಈಗಾಗಲೇ ಚಾಲ್ತಿಯಲ್ಲಿದ್ದರೂ ಹೊಸ ನಿಯಮವನ್ನು ಏಕೆ ರೂಪಿಸಲಾಗಿದೆ’ ಎಂದು ಪ್ರಶ್ನಿಸಿ ಹೆಚ್ಚಿನ ವಿವರ ನೀಡುವಂತೆ ಸೂಚಿಸಿತು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿಗೆ ಕಾಲಾವಕಾಶ ನೀಡಲಾಗಿದ್ದು ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !