ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯ 12ನೇ ಆವೃತ್ತಿ: ಲೋಹದ ಹಕ್ಕಿಗಳ ಹಾರಾಟಕ್ಕೆ ಯಲಹಂಕ ಸಜ್ಜು

ಗೇಟ್ ನಂ.1 ರಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶವಿಲ್ಲ
Last Updated 30 ಜನವರಿ 2019, 13:25 IST
ಅಕ್ಷರ ಗಾತ್ರ

ಬೆಂಗಳೂರು: ಏರೋ ಇಂಡಿಯ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಗೆ ಯಲಹಂಕ ವಾಯುನೆಲೆ ಸಜ್ಜಾಗಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯಲಹಂಕ ವಾಯುನೆಲೆಯ ಏರ್ ಕಮಾಡೊರ್ ರವುರಿ ಶೀಥಲ್, 'ಈ ಬಾರಿ ವೈಮಾನಿಕ ಪ್ರದರ್ಶನ, ಯುದ್ಧ ವಿಮಾನಗಳ ಕಸರತ್ತುಗಳ ಜೊತೆಗೆ ಡ್ರೋನ್ ಸ್ಪರ್ಧೆ, ಮಹಿಳಾ ದಿನಾಚರಣೆ ಆಯೊಜಿಸಲಾಗಿದೆ' ಎಂದರು.

'ಇದುವರೆಗೆ ಕಸರತ್ತು ಪ್ರದರ್ಶನಕ್ಕೆ 31 ಯುದ್ಧವಿಮಾನಗಳು ಹಾಗೂ ಪ್ರದರ್ಶನಕ್ಕೆ 22 ಯುದ್ಧವಿಮಾನಗಳು ನೋಂದಾಯಿಸಿವೆ. 2 ರಫೇಲ್ ಯುದ್ಧವಿಮಾನಗಳೂ ಕಸರತ್ತು ಪ್ರದರ್ಶಿಸಲಿದ್ದು, 1 ವಿಮಾನ ಪ್ರದರ್ಶನದಲ್ಲಿ ಭಾಗವಹಿಸಲಿದೆ.

ಈ ಬಾರಿ ಗೇಟ್ ನಂ.1 ರಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶವಿಲ್ಲ. ಅದರ ಬದಲು ಯಲಹಂಕ ನಗರದಿಂದ ಪ್ರವೇಶಾವಕಾಶ ಕಲ್ಪಿಸಲಾಗಿದೆ.

2017ರ ಏರೋಇಂಡಿಯ ಪ್ರದರ್ಶನವನ್ನು ಒಟ್ಟು 5.25 ಲಕ್ಷ ಮಂದಿ ವೀಕ್ಷಿಸಿದ್ದರು. ಈ ಸಲ ಅದಕ್ಕಿಂತಲೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT