ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏರೋಕಾನ್‌–2022’ಕ್ಕೆ ಇಂದು ಚಾಲನೆ

Last Updated 1 ಜೂನ್ 2022, 20:26 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ವೈಮಾಂತರಿಕ್ಷ ಸಮ್ಮೇಳನದ ಎರಡನೇ ಆವೃತ್ತಿ ‘ಏರೋಕಾನ್‌–2022’ ನಗರದಲ್ಲಿ ಜೂನ್‌ 2 ಮತ್ತು 3ರಂದು ನಡೆಯಲಿದೆ.

ಸೊಸೈಟಿ ಆಫ್ ಆಟೋಮೋಟಿವ್ ಎಂಜಿನಿಯರ್ಸ್‌ ಇಂಡಿಯಾ(ಎಸ್ಎಇಇಂಡಿಯಾ) ಮತ್ತು ಎಸ್ಎಇ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ.

ವೈಮಾಂತರಿಕ್ಷ ಕ್ಷೇತ್ರದಲ್ಲಿನ ಸವಾಲುಗಳು, ಸಂಶೋಧನೆಗಳು ಮತ್ತು ಅವಕಾಶಗಳು ಕುರಿತು ತಜ್ಞರು ಸಮ್ಮೇಳನದಲ್ಲಿ ಚರ್ಚಿಸಲಿದ್ದಾರೆ. ವೈಮಾಂತರಿಕ್ಷ ವಲಯ ಮತ್ತು ರಕ್ಷಣಾ ಕ್ಷೇತ್ರದ ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಲು ಈ ಸಮ್ಮೇಳನ ವೇದಿಕೆಯಾಗಲಿದೆ. ಈ ಸಮ್ಮೇಳನದಲ್ಲಿ ಅತ್ಯುತ್ತಮ ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧನೆಯನ್ನು ಒಟ್ಟುಗೂಡಿಸುತ್ತದೆ.

ಮಾರತಹಳ್ಳಿಯ ದೊಡ್ಡನೆಕ್ಕುಂದಿ ಮುಖ್ಯ ರಸ್ತೆಯಲ್ಲಿರುವ ಎಚ್‌ಎಎಲ್‌ ಮ್ಯಾನೇಜ್‌ಮೆಂಟ್ ಅಕಾಡೆಮಿಯಲ್ಲಿ ಸಮ್ಮೇಳನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT