ವಿದ್ಯಾರ್ಥಿಗಳಿಗಾಗಿ ‘ಸೈಬರ್ ಭದ್ರತೆ’ ಕಾರ್ಯಾಗಾರ

7

ವಿದ್ಯಾರ್ಥಿಗಳಿಗಾಗಿ ‘ಸೈಬರ್ ಭದ್ರತೆ’ ಕಾರ್ಯಾಗಾರ

Published:
Updated:

ಬೆಂಗಳೂರು: ಸೈಬರ್‌ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಇರುವ ಬೇಡಿಕೆ ಮತ್ತು ಉದ್ಯೋಗಗಳ ಲಭ್ಯತೆ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ‘ಏಜೀಸ್ ಸ್ಕೂಲ್ ಆಫ್ ಡೇಟಾ ಸೈನ್ಸ್’ ವಿದ್ಯಾರ್ಥಿಗಳಿಗಾಗಿ ಒಂದು ದಿನದ ‘ಸೈಬರ್ ಭದ್ರತೆ’ ಕಾರ್ಯಾಗಾರ ಆಯೋಜಿಸಿತ್ತು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಪೇಶ್ ದಹೇರಿಯಾ ಮಾತನಾಡಿ, ‘ಮುಂದಿನ ದಶಕದಲ್ಲಿ ಉದ್ದಿಮೆಗಳು ಮತ್ತು ಸರ್ಕಾರವು ಸುರಕ್ಷಿತ ಡೇಟಾ ಮತ್ತು ಮಾಹಿತಿ ಪದ್ಧತಿಗೆ ಹೆಚ್ಚು ಆದ್ಯತೆ ನೀಡಲಿವೆ. 2019ರ ವೇಳೆಗೆ ಈ ಕ್ಷೇತ್ರದಲ್ಲಿ 15 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ’ ಎಂದರು.

ಅಗ್ನಿ ಇನ್‍ಫರ್ಮೇಷನ್ ಸಿಸ್ಟಮ್ಸ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಅಮಿತ್ ಗುಪ್ತಾ, ರೆಡ್‍ ಟೀಂ ಸೈಬರ್ ಸೆಕ್ಯೂರಿಟಿ ಲ್ಯಾಬ್ಸ್ ಎಲ್‍ಎಲ್‍ಪಿಯ ಸಂಸ್ಥಾಪಕ ಜೈಝಲ್ ಅಲಿ, ಐಬಿಎಂ ಸೆಕ್ಯೂರಿಟಿ-ಏಷ್ಯಾ ಪೆಸಿಫಿಕ್‍ನ ಬ್ಯುಸಿನೆಸ್ ಯುನಿಟ್ ಎಕ್ಸಿಕ್ಯುಟಿವ್ ವೈದ್ಯನಾಥನ್ ಆರ್.ಅಯ್ಯರ್ ಉಪನ್ಯಾಸ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !