ಬೆಂಗಳೂರು: ಭಾರತೀಯ ಸೇನೆ ಹಮ್ಮಿಕೊಂಡಿದ್ದ ಅಗ್ನಿವೀರರ ನಿರ್ಗಮನ ಪಥಸಂಚಲನವು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆ್ಯಂಡ್ ಸೆಂಟರ್ನ (ಎಂಇಜಿ) ಮೈದಾನದಲ್ಲಿ ಶನಿವಾರ ನಡೆಯಿತು.

2,181 ಅಗ್ನಿವೀರರು ಎಂಇಜಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ್ದು, ಪಥಸಂಚಲನ ಮಾಡಿದರು. ಸೇನಾ ವಾದ್ಯಗೋಷ್ಠಿಯ ಪ್ರೇರಣಾದಾಯಕ ಸಂಗೀತದ ನಾದಕ್ಕೆ ಸಮನ್ವಯದಿಂದ ಹೆಜ್ಜೆ ಹಾಕಿದರು. ದೇಶದ ವಿವಿಧ ಭಾಗಗಳಿಂದ ತರಬೇತಿಗೆ ಆಯ್ಕೆಯಾಗಿದ್ದ ಅವರು, ಹಲವು ತಿಂಗಳ ಕಠಿಣ ತರಬೇತಿ ಪೂರ್ಣಗೊಳಿಸಿದರು. ಭಾರತೀಯ ಸೇನೆಯ ವಿವಿಧ ವಿಶೇಷ ಪಡೆಗಳ ಘಟಕಗಳಲ್ಲಿ ಸೇವಾ ಹಾಗೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವುದಾಗಿ ಈ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಂಡರು.

ಈ ನಿರ್ಗಮನ ಪಥಸಂಚಲನವನ್ನು ಬ್ರಿಗೇಡಿಯರ್ ಅಜಯ್ ಸಿಂಗ್ ಠಾಕೂರ್ ವೀಕ್ಷಿಸಿದರು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕಾಗಿ ಅವರು ಅಗ್ನಿವೀರರಿಗೆ ಅಭಿನಂದನೆ ಸಲ್ಲಿಸಿದರು. ತರಬೇತಿ ಅವಧಿಯಲ್ಲಿ ತೋರಿದ ಸಮರ್ಪಣೆ, ದೃಢ ಸಂಕಲ್ಪ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದರು.

ಅಗ್ನಿವೀರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸೈನಿಕ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಧೈರ್ಯ ಮತ್ತು ಬದ್ಧತೆ ಮುಖ್ಯ. ಭಾರತೀಯ ಸೇನೆಯ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ತಮ್ಮ ಮುಂದಿನ ಸೇವಾ ಜವಾಬ್ದಾರಿಗಳಲ್ಲಿ ಎತ್ತಿಹಿಡಿಯಬೇಕು’ ಎಂದು ಕರೆ ನೀಡಿದರು.

ಸೈನಿಕರ ಹಿಂದೆ ಸದಾ ಬೆಂಬಲವಾಗಿ ನಿಲ್ಲುವ ಕುಟುಂಬಗಳ ಪಾತ್ರವನ್ನು ಗೌರವಿಸುವ ಸಲುವಾಗಿ, ನಿರ್ಗಮಿತ ಅಗ್ನಿವೀರರ ಪೋಷಕರಿಗೆ ‘ಗೌರವ ಪದಕ’ ಪ್ರದಾನ ಮಾಡಲಾಯಿತು.

ಈ ನಿರ್ಗಮನ ಪಥಸಂಚಲನ ಕೇವಲ ಒಂದು ವಿಧಿವಿಧಾನದ ಕಾರ್ಯಕ್ರಮವಾಗಿರದೆ, ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಸೈನಿಕ ಶ್ರೇಷ್ಠತೆಯ ಪರಿಪೂರ್ಣತೆಯನ್ನು ಪ್ರತಿಬಿಂಬಿಸಿತು.

ದೇಶಕ್ಕೆ ಗೌರವದಿಂದ ಸೇವೆ ಸಲ್ಲಿಸಲು ಸಜ್ಜಾಗಿರುವ ಶಿಸ್ತಿನ ಹಾಗೂ ಸಮರ್ಥ ಸೈನಿಕರನ್ನು ರೂಪಿಸುವ ಭಾರತೀಯ ಸೇನೆಯ ಅಚಲ ಬದ್ಧತೆಯನ್ನು ಇದು ಮತ್ತೊಮ್ಮೆ ದೃಢಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.