ಬುಧವಾರ, ನವೆಂಬರ್ 13, 2019
18 °C

ಅ.24ರಿಂದ ಬೆಂಗಳೂರು ಕೃಷಿ ಮೇಳ

Published:
Updated:

ಬೆಂಗಳೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ‘ಬೆಂಗಳೂರು ಕೃಷಿ ಮೇಳ’ ಅಕ್ಟೋಬರ್ 24ರಿಂದ 27ರವರೆಗೆ ನಡೆಯಲಿದೆ.

ಮೇಳದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಸರ್ಕಾರಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಅಭಿವೃದ್ಧಿ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾನಿಲಯಗಳು, ಹಣಕಾಸು ಸಂಸ್ಥೆಗಳು, ಬಿತ್ತನೆ ಬೀಜ ಸಂಸ್ಥೆಗಳು, ಕೃಷಿ ಉಪಕರಣ ತಯಾರಕರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿವೆ.

12 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ. ಮೇಳದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಸಂಸ್ಥೆಗಳು, ಉದ್ದಿಮೆದಾರರು ಮಳಿಗೆಗಳನ್ನು ಅ.12ರೊಳಗೆ ಕಾಯ್ದಿರಿಸಿಕೊಳ್ಳಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿ. ಪಳನಿಮುತ್ತು (ಮೊ:9945254640) ಅವರನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದೆ.

ಪ್ರತಿಕ್ರಿಯಿಸಿ (+)