ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ಕೃಷಿ ಚಟುವಟಿಕೆ

Last Updated 26 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಹೆಸರಘಟ್ಟ: ಕೆಲವು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆಯಿಂದ ಹೋಬಳಿಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.

57 ಗ್ರಾಮಗಳನ್ನು ಒಳಗೊಂಡಿರುವ ಹೆಸರಘಟ್ಟ ಹೋಬಳಿಯಲ್ಲಿ 1,232 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. 982 ಹೆಕ್ಟೇರ್ ಪ್ರದೇಶವು ನೀರಾವರಿಯಾಗಿದ್ದು, ಅಂತರ್ಜಲ ಮಟ್ಟ 2 ವರ್ಷ
ಗಳಿಂದ ಕುಸಿದು ಹೋಗಿದೆ. 2,164 ಎಕರೆಯಲ್ಲಿ ರಾಗಿ ಬೆಳೆಯುತ್ತಿದ್ದು, ತುಂತುರು ಮಳೆಯಿಂದ ಬಿತ್ತನೆ ಕೆಲಸವನ್ನು ರೈತರು ಪ್ರಾರಂಭಿಸಿದ್ದಾರೆ.

ರಾಗಿ ಜೊತೆಯಲ್ಲಿ ತರಕಾರಿ ಬೆಳೆಗಳಾದ ಮೂಲಂಗಿ, ಅಲಸಂದೆ,ಟೊಮೆಟೊ, ಮೆಣಸಿನಕಾಯಿ, ಬೆಂಡೆಕಾಯಿಯನ್ನು ಹೊಲದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಹೆಸರಘಟ್ಟದ ರೈತ ಮಹೇಶ್, ‘ಈ ಸಾರಿ ಮುಂಗಾರು ಮಳೆ ನಿಧಾನವಾಗಿ ಪ್ರಾರಂಭವಾಯಿತು. ಇಷ್ಟರೊಳಗೆ ರಾಗಿ ಬಿತ್ತನೆ ಮಾಡಬೇಕಿತ್ತು. ಮಳೆ ಅಭಾವದಿಂದ ಅಲ್ಪ ಅವಧಿ ರಾಗಿ ಬೀಜ ಬಿತ್ತನೆ ಮಾಡಿದೆವು’ ಎಂದರು.

‘ಮೆಕ್ಕೆಜೋಳ ಬೆಳೆಯಲು ರೈತರು ನಿರಾಸಕ್ತಿ ತೋರಿಸಿದ್ದಾರೆ. ಸೈನಿಕ ಹುಳಗಳು ಹತೋಟಿಗೆ ಬಾರದ ಕಾರಣ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಸರಘಟ್ಟ ಹೋಬಳಿಯಲ್ಲಿ 384 ಎಕರೆಯಲ್ಲಿ ಮೆಕ್ಕೆಜೋಳ ಹಾಳಾಗಿದೆ’ ಎಂದು ಬ್ಯಾತದ ರೈತ ನಾಗರಾಜ್ ತಿಳಿಸಿದರು.

‘ಹೆಸರಘಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ಕೃಷಿ ಉಪಕರಣಗಳು ಬಾಡಿಗೆಗೆ ಸಿಗಲಿದೆ. ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು’ ಎಂದು ಕೃಷಿ ಅಧಿಕಾರಿ ರಂಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT