ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಅರಣ್ಯ ಯೋಜನೆ: ಈಶಾ ಔಟ್‌ರೀಚ್‌ ಜತೆ ಒಪ್ಪಂದ

Last Updated 23 ಆಗಸ್ಟ್ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈಶಾ ಫೌಂಡೇಷನ್‌ನ ಕಾವೇರಿ ಕೂಗು ಹಾಗೂ ಸರ್ಕಾರದ ವಿವಿಧ ಕೃಷಿ ಅರಣ್ಯ ಯೋಜನೆಗಳ ಕುರಿತು ಜಂಟಿಯಾಗಿ ಪ್ರಚಾರ ನಡೆಸಲು ರಾಜ್ಯ ಸರ್ಕಾರ ಮತ್ತು ಈಶಾ ಔಟ್‌ರೀಚ್‌ ಒಪ್ಪಂದಕ್ಕೆ ಸಹಿ ಹಾಕಿವೆ.

ಕೊಡಗು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೃಷಿ ಅರಣ್ಯ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಹಾಗೂ ಈಶಾ ಔಟ್‌ರೀಚ್‌ ಸಹಭಾಗಿತ್ವದಲ್ಲಿ ಕೆಲಸ ಮಾಡಲಿವೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್‌ ಮತ್ತು ಈಶಾ ಔಟ್‌ರೀಚ್‌ ಯೋಜನಾ ನಿರ್ದೇಶಕ ಅಂಬರೀಷ್ ಮಂಗಳವಾರ ಒಪ್ಪಂದಕ್ಕೆ ಸಹಿ
ಹಾಕಿದರು.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಈಶಾ ಫೌಂಡೇಷನ್‌ನ ಮುಖ್ಯಸ್ಥ ಸದ್ಗುರು, ‘ಮರ ಆಧಾರಿತ ಕೃಷಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಸರ್ಕಾರ ಬದ್ಧತೆ ತೋರಿದೆ. ಈ ಒಪ್ಪಂದವು ಕಾವೇರಿಯನ್ನು ಪುನರುಜ್ಜೀವನಗೊಳಿಸಲು, ಮಣ್ಣಿನ ಸಂರಕ್ಷಣೆ ಮತ್ತು ರೈತರಿಗೆ ನೆರವಾಗಲು ಈ ಯೋಜನೆ ಸಹಕಾರಿಯಾಗಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT