ಬೆಂಗಳೂರು: ‘ಸಾಹಿತ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸುವುದರಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ. ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ’ ಎಂದು ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರವು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ಕಾವ್ಯ ಮೀಮಾಂಸೆ ಹಾಗೂ ವಿಮರ್ಶೆಯ ಪರಿಭಾಷೆ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ನಾವು ಇಂದಿಗೂ ಪಾಶ್ಚಾತ್ಯ ವಿಮರ್ಶೆಯ ಮಾದರಿಗಳನ್ನು ಇಟ್ಟುಕೊಂಡೇ ಸಾಹಿತ್ಯ ಕೃತಿಯೊಂದರ ತೌಲನಿಕ ಅಧ್ಯಯನ ಮಾಡುತ್ತೇವೆ. ಆಧುನಿಕ ಕಾಲಘಟ್ಟದಲ್ಲಿ ಇಂದಿನ ಮಾದರಿಗಳು ಬೇರೆಯದೆ ಆಗಿದೆ’ ಎಂದರು.

‘ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ಮಾದರಿ ಹಾಕಿಕೊಟ್ಟದ್ದು ಕುವೆಂಪು. ಅವರು ವಿಮರ್ಶೆಯ ಪರಿಭಾಷೆ ಸಿದ್ಧಾಂತದ ಪರಿಕಲ್ಪನೆಗಳ ಬಗ್ಗೆ ಒಂದು ಸಿದ್ಧ ಮಾದರಿಯನ್ನು ತೋರಿಸಿಕೊಟ್ಟರು. ಆದರೆ, ಅವು ಪಾಶ್ಚಾತ್ಯ ವಿಮರ್ಶೆಯ ದಟ್ಟ ಪ್ರಭಾವದಲ್ಲಿದ್ದವು. ಆ ದಾರಿಯಲ್ಲಿ ಮುಂದುವರಿದು, ಕನ್ನಡದ ವಿಮರ್ಶೆ ಮತ್ತು ಪೌರಾಣಿಕತೆ ಹೇಗಿರಬೇಕೆಂದು ತೋರಿಸಿಕೊಟ್ಟವರು ಜಿ.ಎಸ್. ಶಿವರುದ್ರಪ್ಪ’ ಎಂದು ಸ್ಮರಸಿಕೊಂಡರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ‘ಸಾಹಿತ್ಯವು ಜೀವನ ವಿಧಾನ ರೂಪಿಸುವ ಜತೆಗೆ, ಬದುಕುವುದನ್ನು ಕಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಾಹಿತ್ಯದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಕನ್ನಡ ಸಾಹಿತ್ಯದಲ್ಲಿ ಜಿ.ಎಸ್. ಶಿವರುದ್ರಪ್ಪ ಅವರ ಸಾಹಿತ್ಯ ಸಾಧನೆ ಬಣ್ಣಿಸುವುದು ಅತ್ಯಂತ ಕಷ್ಟದ ಕೆಲಸ’ ಎಂದರು.

ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಎಚ್. ಶಶಿಕಲಾ, ‘ಒಂದು ಸಾಹಿತ್ಯ ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯ ವಿಮರ್ಶೆ ಅತ್ಯಗತ್ಯ’ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡೊಮಿನಿಕ್, ಮುನಿಯಪ್ಪ ಹಾಗೂ ವಡ್ಡೆ ಹೇಮಲತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.