ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಶುದ್ಧಿಗೆ 500 ಯಂತ್ರ

Last Updated 18 ಆಗಸ್ಟ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಅಲ್ಲಲ್ಲಿ 500 ವಾಯುಶುದ್ಧಿ ಯಂತ್ರ ಅಳವಡಿಸುವ ಪ್ರಸ್ತಾವಕ್ಕೆ ಬಿಬಿಎಂಪಿ ಟ್ರಾಫಿಕ್ ಎಂಜಿನಿಯರಿಂಗ್ ಕೋಶ ಅನುಮೋದನೆ ನೀಡಿದೆ.

ಹಡ್ಸನ್ ವೃತ್ತದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಅಷ್ಟೂ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿ ಯೊಬ್ಬರು ತಿಳಿಸಿದರು.

‘ಈ ಯಂತ್ರಗಳು ತನ್ನ ಸುತ್ತಮುತ್ತಲಲ್ಲಿ 70 ಅಡಿಯಿಂದ 90 ಅಡಿಗಳಷ್ಟು ವ್ಯಾಪ್ತಿಯ ಗಾಳಿಯನ್ನು ಶುದ್ಧೀಕರಿಸಲಿವೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್‌, ಹೆಬ್ಬಾಳ ಹಾಗೂ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಇವುಗಳನ್ನು ಅಳವಡಿಸಲಾಗುವುದು. ಸಂಚಾರ ದಟ್ಟಣೆ ಹೆಚ್ಚಿರುವ ವೃತ್ತಗಳಲ್ಲಿನ ಪೊಲೀಸ್ ಚೌಕಿಗಳಲ್ಲೂ ಜೋಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ದೂಳಿನ ಕಣಗಳನ್ನು ಹೀರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಯಂತ್ರ ಅಳವಡಿಸಲು ತಲಾ ₹3 ಲಕ್ಷದಿಂದ ₹5 ಲಕ್ಷ ವೆಚ್ಚವಾಗಲಿದೆ. ಒಟ್ಟು ₹20 ಕೋಟಿ ಮೊತ್ತದ ಯೋಜನೆ ಇದಾಗಿದೆ. ಬಿಬಿಎಂಪಿ ನಯಾಪೈಸೆ ಖರ್ಚು ಮಾಡುವುದಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT