ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್ 197ನೇ ಕೇಂದ್ರ ಉದ್ಘಾಟನೆ: 'ಗುಣಮಟ್ಟದ ಶಿಕ್ಷಣ ಆಕಾಶ್‌ ಗುರಿ'

ಬೆಂಗಳೂರಿನಲ್ಲಿ 8ನೇ ಕೇಂದ್ರ
Last Updated 18 ಜನವರಿ 2020, 11:01 IST
ಅಕ್ಷರ ಗಾತ್ರ

ಬೆಂಗಳೂರು:'ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿಯನ್ನು ಒದಗಿಸುವುದೇ 'ಆಕಾಶ್' ಗುರಿ ಎಂದು ಆಕಾಶ್ ಎಜ್ಯುಕೇಷನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾಶ್ ಚೌಧರಿ ಹೇಳಿದರು.

ನಗರದ ರಾಜರಾಜೇಶ್ವರಿನಗರದಲ್ಲಿಶನಿವಾರಸಂಸ್ಥೆಯ 197ನೇ ಕೇಂದ್ರವನ್ನು ಉದ್ಘಾಟಿಸಿ(ಬೆಂಗಳೂರಿನಲ್ಲಿ 8ನೇ) ಅವರು ಮಾತನಾಡಿದರು.

'ವೃತ್ತಿಶಿಕ್ಷಣ ಕೋರ್ಸ್‌ಗಳಿಗೆಸೇರುವ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವುದಕ್ಕೆ ಎಲ್ಲ ರೀತಿಯಲ್ಲೂ ನಮ್ಮ ಸಂಸ್ಥೆ ನೆರವಾಗುತ್ತಿದೆ. ಇಲ್ಲಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳು ಉತ್ತಮ ಪ್ರಗತಿ ಸಾಧಿಸಿದ್ದಾರೆ’ ಎಂದರು.

'ಎಲ್ಲ ಪ್ರದೇಶಗಳ ವಿದ್ಯಾರ್ಥಿಗಳಿಗೂ ಆಕಾಶ್ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ದೇಶದಾದ್ಯಂತ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ಈಗಾಗಲೇ ಜಯನಗರ ಸೇರಿದಂತೆ, ಬೆಂಗಳೂರಿನ ಹಲವೆಡೆ ನಮ್ಮ ಕೇಂದ್ರಗಳಿವೆ. ಇನ್ನಷ್ಟು ವಿದ್ಯಾರ್ಥಿಗಳಿಗೆ ತಲುಪುವ ಉದ್ದೇಶದಿಂದ ರಾಜರಾಜೇಶ್ವರಿ ನಗರದಲ್ಲಿ ಹೊಸ ಕೇಂದ್ರ ಆರಂಭಿಸಲಾಗಿದೆ. ಬಾಣಸವಾಡಿಯಲ್ಲೂ ಮತ್ತೊಂದು ಕೇಂದ್ರ ಆರಂಭಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

'ಪರಿಣಾಮಕಾರಿ ಕಲಿಕೆಗಾಗಿ, ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದೇವೆ. ಅನುಕೂಲವಾಗುವ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ವಿವಿಧ ಕೋರ್ಸ್‌ಗಳನ್ನುದೃಷ್ಟಿಯಲ್ಲಿಟ್ಟುಕೊಂಡು ಆ್ಯಪ್ ಕೂಡ ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯ ಅಧಿಕೃತ ಜಾಲತಾಣದಲ್ಲೂ ಎಲ್ಲ ಪಠ್ಯಾಂಶಗಳು ಇರುತ್ತವೆ. ತರಗತಿ ಕೊಠಡಿಗಳಲ್ಲಿ ರೆಕಾರ್ಡರ್‌ಗಳನ್ನು ಅಳವಡಿಸಲಾಗಿದೆ. ಗೈರು ಹಾಜರಾದ ವಿದ್ಯಾರ್ಥಿಗಳು ಅಥವಾ ತರಗತಿಯಲ್ಲಿ ಅರ್ಥಮಾಡಿಕೊಳ್ಳಲು ಆಗದಿದ್ದರೆ ಅವನ್ನು ಮನೆಯಲ್ಲೇ ಕಲಿಯುವ ಉದ್ದೇಶವಿದ್ದರೆ, ಅಂಥವರಿಗೆ ಎಸ್‌ಡಿ ಕಾರ್ಡ್‌ಗಳನ್ನು ನೀಡುತ್ತೇವೆ. ಅದರಲ್ಲಿನ ಮಾಹಿತಿ ಮೂಲಕವೂ ಪರೀಕ್ಷೆಗೆ ತಯಾರಿ ನಡೆಸಬಹುದು' ಎಂದರು.

ವಿದ್ಯಾರ್ಥಿ ವೇತನ

ಗುಣಮಟ್ಟದ ಶಿಕ್ಷಣ ಪಡೆಯುವುದಕ್ಕೆ, ಆರ್ಥಿಕ ಸಮಸ್ಯೆಗಳು ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ, ಅಡ್ಮಿಷನ್ ಕಂ ಸ್ಕಾಲರ್ ಷಿಪ್ ಟೆಸ್ಟ್- ಎಪಿಎಸ್‌ಟಿ, ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್‌ಗಳ (ಎಎನ್‌ಟಿಎಚ್ಇ)ಗಳ ಮೂಲಕ ವಿದ್ಯಾರ್ಥಿವೇತನವನ್ನೂ ಒದಗಿಸಲಾಗುತ್ತಿದೆ.‌ ಸೆಪ್ಟೆಂಬರ್ ಅಥವಾ ಮಾರ್ಚ್, ಏಪ್ರಿಲ್ ನಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಾಗುತ್ತದೆ. ಶೀಘ್ರದಲ್ಲೇ, 'ಆಕಾಶ್ ರಾಷ್ಟ್ರೀಯ ಅರ್ಹತಾ ಹಾಗೂ ವಿದ್ಯಾರ್ಥಿವೇತನ ಪರೀಕ್ಷೆ ಕೂಡ ಆರಂಭವಾಗಲಿದೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಶುಲ್ಕದಲ್ಲಿ ಶೇ 80ರಷ್ಟು ರಿಯಾಯಿತಿ ಪಡೆಯಬಹುದು.

ಬೆಂಗಳೂರು ಸೇರಿದಂತೆ, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಒಟ್ಟು 13 ಕೇಂದ್ರಗಳಿವೆ. ಮುಂದಿನ ದಿನಗಳಲ್ಲಿ, ಧಾರವಾಡದಲ್ಲೂ ಕೇಂದ್ರ ಆರಂಭಿಸುವ ಉದ್ದೇಶವಿದೆ ಎನ್ನುತ್ತಾರೆ ಆಕಾಶ್ ಎಜುಕೇಷನ್ ಸರ್ವೀಸಸ್ ಲಿಮಿಡೆಡ್ ನ ಸಿಇಒ ಆಕಾಶ್ ಚೌಧರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT