ಮಂಗಳವಾರ, ನವೆಂಬರ್ 30, 2021
22 °C

ಆಕಾಶವಾಣಿ: ‘ಅಮೃತ ವರ್ಷಿಣಿ’ ಜಾಗಕ್ಕೆ ‘ರಾಗಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಿಗೆ ವಿಶೇಷ ವೇದಿಕೆಯಾಗಿರುವ ಆಕಾಶವಾಣಿಯ ‘ಅಮೃತ ವರ್ಷಿಣಿ’ ಸ್ಥಿತ್ಯಂತರ ಕಾಣಲಿದೆ.

‘ಅಮೃತ ವರ್ಷಿಣಿ’ಯ ಸ್ಥಾನವನ್ನು ‘ರಾಗಂ’ ತುಂಬಲಿದೆ. ಆದರೆ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಬದಲಾಗುವುದಿಲ್ಲ. ಕಲಾವಿದರಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆ
ಯಲಿವೆ. ಇದು ಕೇವಲ ತಾಂತ್ರಿಕ ಬದಲಾವಣೆಯಷ್ಟೇ ಎಂದು ಮೂಲಗಳು ತಿಳಿಸಿವೆ.

100.1 ತರಂಗಾಂತರದಲ್ಲೇ ‘ಅಮೃತ ವರ್ಷಿಣಿ’ ಇದುವರೆಗೆ ಲಭ್ಯವಾಗುತ್ತಿತ್ತು. ‘ರಾಗಂ’ ಸಹ ಇದೇ ತರಂಗಾಂತರದಲ್ಲಿ ದೊರೆಯಲಿದೆ.

ಆಕಾಶವಾಣಿ ತನ್ನ ಅಸ್ಮಿತೆಯನ್ನು ಸದಾ ಉಳಿಸಿಕೊಂಡು ಬಂದಿದೆ. ಭವಿಷ್ಯದಲ್ಲೂ ಉಳಿಸಿಕೊಳ್ಳಲಿದೆ. ‘ರಾಗಂ’ ಸಹ ಆಕಾಶವಾಣಿಯ ಭಾಗವಾಗಿದೆ. ಮೊದಲಿಗಿಂತಲೂ ಹೆಚ್ಚು ಶಾಸ್ತ್ರೀಯ ಕಾರ್ಯಕ್ರಮಗಳು ಕಲಾವಿದರಿಗೆ ದೊರೆಯಲಿವೆ. ಹೀಗಾಗಿ, ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. 

ಆಕಾಶವಾಣಿಯ ’ರಾಗಂ’ ಡಿಟಿಎಚ್‌ ಚಾನಲ್‌ ಆಗಿದ್ದು, ಯೂಟ್ಯೂಬ್‌ ಚಾನಲ್‌ ಅಲ್ಲ. ಇದು
ವರೆಗೆ ಬೆಳಿಗ್ಗೆ 6ರಿಂದ 9ರವರೆಗೆ ಹಾಗೂ ಸಂಜೆ 6ರಿಂದ 11ರವರೆಗೆ ಸಂಗೀತ ಕಾರ್ಯಕ್ರಮಗಳನ್ನು ‘ಅಮೃತ ವರ್ಷಿಣಿ’ಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಇನ್ನು ಮುಂದೆ ‘ರಾಗಂ’ನಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಪ್ರಸಾರವಾಗಲಿವೆ. ಇದರಿಂದ ಹೆಚ್ಚು ಸಮಯ ದೇಶದ ವಿವಿಧೆಡೆಯ ಕಲಾವಿದರ ಕಾರ್ಯಕ್ರಮಗಳು ಎಂದಿನಂತೆ ಪ್ರಸಾರವಾಗಲಿವೆ ಎಂದು ತಿಳಿಸಿದ್ದಾರೆ. 

‘ರಾಗಂ’ನಲ್ಲಿ ಚಿತ್ರ ಸಂಗೀತಕ್ಕೆ ಅವಕಾಶ ನೀಡುವುದಿಲ್ಲ. ಇದು ಸಂಪೂರ್ಣ ಶಾಸ್ತ್ರೀಯ ಸಂಗೀತಕ್ಕೆ ಮೀಸಲಾಗಿದೆ. ಇದು ರಾಷ್ಟ್ರದಾದ್ಯಂತ ಪ್ರಸಾರವಾಗಲಿದ್ದು, ಹೊಸ ಅವಕಾಶಗಳಿವೆ. ಸಹಜವಾಗಿಯೇ ಕೆಲ ಬದಲಾವಣೆಗಳು ಬೇರೆ ಬೇರೆ ರೀತಿಯಲ್ಲಿರುತ್ತವೆ ಎಂದು ವಿವರಿಸಿದ್ದಾರೆ.

ಆಧುನಿಕತೆಗೆ ತಕ್ಕಂತೆ ಬದಲಾವಣೆ ಅನಿವಾರ್ಯ. ಜನರು ಡಿಜಿಟಲ್‌ ಮಾಧ್ಯಮಗಳಿಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಆಕಾಶವಾಣಿಯೂ ಬದಲಾಗುವುದು ಅನಿವಾರ್ಯ. ಜನರ ಪ್ರತಿಕ್ರಿಯೆಯೂ ನಿರಂತರವಾಗಿ ದೊರೆಯುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.

‘ಅಮೃತ ವರ್ಷಿಣಿ’  ಪ್ರಸಾರವು 2004ರ ಜ. 26ರಂದು ಆರಂಭವಾಗಿತ್ತು. ಹಳೆಯ ’ಟ್ರಾನ್ಸ್‌ಮೀಟರ್‌’ ಬದಲಾಯಿಸಬೇಕಾಗಿರುವ ಕಾರಣದಿಂದ ಈಗ ಬದಲಾವಣೆ ಮಾಡಲಾಗುತ್ತಿದೆ. ಅ.18ರಿಂದಲೇ ಈ ಬದಲಾವಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು