ಬೆಂಗಳೂರು: ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯವು ಜಾಲಹಳ್ಳಿಯ ಏರ್ಫೋರ್ಸ್ ಸ್ಟೇಷನ್ನಲ್ಲಿ ಸೆ.27ರಿಂದ ಅ.7ರವರೆಗೆ ಅಖಿಲ ಭಾರತ ವಾಯು ಸೈನಿಕ ಶಿಬಿರ ನಡೆಸಲಿದೆ.

ಇದು ಏರ್ವಿಂಗ್ನ ಪ್ರಮುಖ ಶಿಬಿರಗಳಲ್ಲಿ ಒಂದಾಗಿದ್ದು, ಎನ್ಸಿಸಿ ಕೆಡೆಟ್ಗಳ ಕನಸು ನನಸು ಮಾಡುವ ಪ್ರಕ್ರಿಯೆ ಆಗಿದೆ. ದೇಶದ 16 ನಿರ್ದೇಶನಾಲಯಗಳ 608 ಕೆಡೆಟ್ಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಮೈಕ್ರೋಲೈಟ್ ಫ್ಲೈಯಿಂಗ್, ಏರೋಮಾಡೆಲಿಂಗ್, ಡ್ರಿಲ್, ಫೈರಿಂಗ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಎನ್ಸಿಸಿ ಡೈರಕ್ಟರೇಟ್ ಜನರಲ್ ಮೌಲ್ಯಮಾಪನ ಮಾಡಲಿದ್ದಾರೆ. ವಿಜೇತ ತಂಡವು ‘ಆಸ್ಕರ್ ಚೀಫ್ ಆಫ್ ಏರ್ ಸ್ಟಾಫ್ ಅಖಿಲ ಭಾರತ ವಾಯು ಸೈನಿಕ್’ ಟ್ರೋಫಿ ಪಡೆಯಲಿದೆ.

ಎನ್ಸಿಸಿ ಹೆಚ್ಚುವರಿ ಮಹಾನಿರ್ದೇಶಕರಾಗಿರುವ ಏರ್ ವೈಸ್ಮಾರ್ಷಲ್ ಪಿ.ವಿ.ಎಸ್.ನಾರಾಯಣ ಸೆ.27ರಂದು ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಸ್ಪರ್ಧೆಗಳಲ್ಲದೇ ಭಾರತೀಯ ವಾಯುಪಡೆಯ ಸೇವಾ ತರಬೇತಿ ಸಂಸ್ಥೆಯಾದ ‘ಸೆಂಟರ್ ಫಾರ್ ಲೀಡರ್ಶಿಪ್ ಆ್ಯಂಡ್ ಬಿಹೇವಿಯರಲ್ ಸ್ಟಡೀಸ್’ (ಸಿಎಲ್ಎಬಿಎಸ್), ನಾಯಕತ್ವ ಕೌಶಲಗಳ ಕುರಿತು ಕೆಡೆಟ್ಗಳಿಗೆ ತರಬೇತಿಯನ್ನು ನೀಡಲಿದೆ. ಡ್ರೋನ್ ತರಬೇತಿ, ಯಲಹಂಕ ವಾಯುಪಡೆ ಸ್ಟೇಷನ್ಗೆ ಪ್ರವಾಸ ಸಹಿತ ವಿವಿಧ ಕಾರ್ಯಕ್ರಮಗಳು ಶಿಬಿರದ ಭಾಗವಾಗಿ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.