ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ದಾಖಲೆಗೆ ಕಿರಿಯ ಕವಯಿತ್ರಿ ಅಮನ

Last Updated 25 ಮಾರ್ಚ್ 2023, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕಿರಿಯ ಕವಯಿತ್ರಿ ಮತ್ತು ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮನ ಜೆ.ಕುಮಾರ್, ಹೊಸದಾಗಿ ಎರಡು ಅಂತರರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

14 ವರ್ಷ 6 ತಿಂಗಳು ವಯಸ್ಸಿನ ಅಮನ ಮೂರು ವರ್ಷಗಳಲ್ಲಿ ಮೂರು ಪುಸ್ತಕಗಳನ್ನು ಎರಡು ಭಾಷೆಗಳಲ್ಲಿ ಬರೆಯುವ ಮೂಲಕ ಅಂತರರಾಷ್ಟ್ರೀಯ ವಿಶ್ವ ದಾಖಲೆಯಲ್ಲಿ ‘ಅತ್ಯಂತ ಕಿರಿಯ ಕವಯಿತ್ರಿ’ ಹಾಗೂ ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ‘ಕಿರಿಯ ಲೇಖಕಿ’ ಎಂಬ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಟಿ.ಎಸ್. ಮತ್ತು ಜೈವಂತ್‌ಕುಮಾರ್ ಅವರ ಮಗಳು ಅಮನ, ಬಿಷಪ್ ಕಾಟನ್ ಶಾಲೆ`ಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಹಾವರ್ಡ್ ವಿಶ್ವವಿದ್ಯಾಲಯದಿಂದ ‘ಮಾಸ್ಟರ್ ಪೀಸಸ್ ಆಫ್ ವರ್ಲ್ಡ್ ಲಿಟರೇಚರ್’ ಎಂಬ ಸಾಹಿತ್ಯ ಕೋರ್ಸ್‌ ಕೂಡ ಮುಗಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ಎರಡು ಪುಸ್ತಕ ಮತ್ತು ಹಿಂದಿಯಲ್ಲಿ ಒಂದು ಪುಸ್ತಕ ಪ್ರಕಟವಾಗಿದ್ದು, ನಾಲ್ಕನೇ ಪುಸ್ತಕ ಪ್ರಕಟಕ್ಕೆ ಸಿದ್ಧವಾಗಿದೆ ಎಂದು ಲತಾ ಟಿ.ಎಸ್. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT