ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ ಕೇವಲ ನನ್ನವರಾಗಿ ಉಳಿಯದೆ ನಾಡಿನ‌ ಮಗನಾದರು: ಸುಮಲತಾ

Last Updated 30 ನವೆಂಬರ್ 2018, 10:55 IST
ಅಕ್ಷರ ಗಾತ್ರ

ಬೆಂಗಳೂರು: 'ನನ್ನ ಅಂಬರೀಷ್ ಕೇವಲ ನನ್ನವರಾಗಿ ಉಳಿಯದೆ, ನಾಡಿನ ಮಗನಾಗಿದ್ದರು. ಅರಸನಂತೆ ಬದುಕಿ, ಅರಸನಾಗಿಯೇ ಹೋರಟು ಹೋದರು' ಎಂದು ಅಂಬರೀಷ್ ಪತ್ನಿ ಸುಮಲತಾ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮ ಶುಕ್ರವಾರ ಆಯೋಜಿಸಿದ್ದ ‘ಅಂಬರೀಷ್‌ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಸ್ನೇಹಿತ, ಗಂಡ, ಇನಿಯ, ತಂದೆ, ಸಹೋದರನಾಗಿ ಇದ್ದವರು. ರಾಜಕೀಯ ನಾಯಕ, ಸಮಾಜ ಸೇವಕನಾಗಿ ಬೆಳೆದವರು' ಎಂದುಸ್ಮರಿಸಿದರು

'ಪುತ್ರ ಅಭಿಷೇಕ್‌ನ ಮೊದಲ‌ ಚಿತ್ರ ನೋಡಬೇಕೆನ್ನುವುದು ಅಂಬರೀಷ್‌ಆಸೆಯಾಗಿತ್ತು. ಅಭಿಷೇಕ್‌ನ ಮೇಲೂ ನಾಡಿನ ಜನತೆಯ ಆಶೀರ್ವಾದ ಇರಲಿ' ಎಂದರು.

‘ಅಂಬರೀಷ್‌ ನೇರವಾಗಿ ಮತ್ತು ಪ್ರೀತಿಯಿಂದ ಮಾತನಾಡುವ ವ್ಯಕ್ತಿಯಾಗಿದ್ದರು. ಸ್ನೇಹ ಹೇಗಿರಬೇಕು ಎಂಬುದನ್ನುಅವರನ್ನು ನೋಡಿ ಕಲಿತಿದ್ದೇನೆ. ಒರಟುತನ ಅವರಿಗೆ ರಕ್ತಗತವಾಗಿಯೇ ಬಂದಿತ್ತು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

‘ಅಂಬರೀಷ್‌ಭೌತಿಕವಾಗಿ ಅಗಲಿರಬಹುದು, ಆದರೆ ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ಅವರು ನೆಲೆಸಿದ್ದಾರೆ. ಅಂತ್ಯಕ್ರಿಯೆ ಸಮಯದಲ್ಲಿ ಯಾವುದೇ ಒಂದು ಅಹಿತಕರ ಘಟನೆ ನಡೆಯಲಿಲ್ಲ. ಇದಕ್ಕೆ ಕಾರಣರಾದ ಮಂಡ್ಯದ ಜನತೆ, ಪೊಲೀಸರು ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು’ ಎಂದರು.

'ತೆಲಗು ಚಿತ್ರ‌ನಟ ಪ್ರಭಾಸ್ ನಟನೆ ಮಾಡಿರುವ ರೆಬೆಲ್ ಸಿನಿಮಾದ ಹಕ್ಕುಗಳನ್ನು ಪಡೆದು, ಕನ್ನಡದಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದೆ. ಇದಕ್ಕೆ ನನ್ನ ಪುತ್ರ ನಿಖಿಲ್ ಹಾಗೂ ಅಂಬರೀಷ್ ಅವರನ್ನು ಸೇರಿಸಿಕೊಂಡು ಸಿನಿಮಾ ಮಾಡುವ ಉದ್ದೇಶ ಇತ್ತು. ಇದಕ್ಕಾಗಿ ಹಕ್ಕುಗಳನ್ನೂ ಪಡೆದಿದ್ದೆ. ಆದರೆ, ರಾಜಕೀಯ ಒತ್ತಡದಿಂದಾಗಿ ಅದು ಸಾಧ್ಯವಾಗಲಿಲ್ಲ ಎಂಬ ನೋವಿದೆ' ಎಂದರು.

‘ಡಾ. ರಾಜ್ ಕುಮಾರ್, ವಿಷ್ಣುವರ್ಧನ ಹಾಗೂ ಅಂಬರೀಷ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಚಿರಸ್ಮರಣೀಯ. ಯಾರ ವಿಷಯದಲ್ಲೂ ತಾರತಮ್ಯ ನಡೆಯಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ.ವಿಷ್ಣು ಸ್ಮಾರಕ ನಿರ್ಮಾಣದ ಬಗೆಗಿರುವ ವಿವಾದವನ್ನು ಶೀಘ್ರವೇಸರಿಪಡಿಸುತ್ತೇವೆ' ಎಂದು ಭರವಸೆ ನೀಡಿದರು.

ಫಿಲ್ಮ್‌ ಸಿಟಿ:ಅಂಬರೀಷ್ ಅವರ ಆಸೆಯಂತೆ ಮೈಸೂರಿನಲ್ಲಿ 'ಫಿಲ್ಮ್‌ ಸಿಟಿ' ಆಗಬೇಕು. ಅದಕ್ಕೆ ಅಂಬರೀಷ್ ಅವರ ಹೆಸರನ್ನೆ ಇಡಬೇಕು' ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಅಂಬರೀಷ್‌ ನೆನಪಿನ ಚಿತ್ರ ಪ್ರದರ್ಶನವನ್ನು ಅಭಿಮಾನಿಗಳು ಕಣ್ತುಂಬಿಕೊಂಡರು
ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಅಂಬರೀಷ್‌ ನೆನಪಿನ ಚಿತ್ರ ಪ್ರದರ್ಶನವನ್ನು ಅಭಿಮಾನಿಗಳು ಕಣ್ತುಂಬಿಕೊಂಡರು

ರಾಮನಗರದಲ್ಲಿ ಫಿಲ್ಮ್ಯೂನಿವರ್ಸಿಟಿ: 'ಮೈಸೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಿಸುವುದರ ಜೊತೆಗೆ, ರಾಮನಗರದಲ್ಲಿ ಸಿನಿಮಾ ವಿಶ್ವವಿದ್ಯಾಲಯ ನಿರ್ಮಾಣ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.

ನಟ ಜಗ್ಗೇಶ್, 'ನಾವು ಸತ್ತ ಮೇಲೆ ಸ್ಮಾರಕ ನಿರ್ಮಿಸಲು ಸರ್ಕಾರವನ್ನು‌ ಜಾಗ ನೀಡಿ ಎಂದು ಕೇಳಿಕೊಳ್ಳಬೇಕಿಲ್ಲ. ನಮ್ಮ ಜಾಗ ನಾವೇ‌ ನೋಡಿಕೊಳ್ಳುತ್ತೇವೆ. ಅಂಬರೀಷ್ಮನಸ್ಸು ಮಾಡಿದ್ದರೆ ಯಾವತ್ತೊ ಮುಖ್ಯಂತ್ರಿಯಾಗಿರುತ್ತಿದ್ದರು' ಎಂದು ಅನಿಸಿಕೆ ಹಂಚಿಕೊಂಡರು.

ನಟ ಶಿವರಾಜ್‌ಕುಮಾರ್‌ ಅವರು ಅಂಬರೀಷ್‌ ಜೊತೆ ಅಭಿನಯಿಸಿದಆಸೆಗೊಬ್ಬ ಮೀಸೆಗೊಬ್ಬ ಹಾಗೂ ದೇವರ ಮಗ ಚಿತ್ರೀಕರಣದ ಮಧುರಕ್ಷಣಗಳನ್ನು ನೆನಪಿಸಿಕೊಂಡರು. ಅಂಬರೀಷ್‌ ಮಾವ ಎಲ್ಲ ಕಾರ್ಯಕ್ರಮಗಳಿಗೂ ಹೊಗ್ತಿದ್ದರು. ಸ್ನೇಹಮಯವಾಗಿದ್ದರು. ಎಲ್ಲ‌ ಕಲಾವಿದರಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತಿದ್ದರು.ಎಲ್ಲರನ್ನು ಒಂದೇ ರೀತಿ ನೋಡುತ್ತಿದ್ದ ಅವರ ಗುಣವನ್ನು‌ ನಾವೆಲ್ಲ‌ ಮುಂದುವರಿಸಿಕೊಂಡು ಹೋಗೋಣ. ಅವರು ಹಾಕಿದ ದಾರಿಯಲ್ಲಿ ‌ನಡೆಯೋಣ' ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT