ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್‌ಗೆ ಸುಗಮ ದಾರಿ ವಿದ್ಯಾರ್ಥಿಗಳ ‘ಸ್ಮಾರ್ಟ್‌’ ಪರಿಹಾರ

Last Updated 27 ಜೂನ್ 2019, 13:54 IST
ಅಕ್ಷರ ಗಾತ್ರ

ನಗರದ ಟ್ರಾಫಿಕ್ ಸಮಸ್ಯೆಯಿಂದ ಆಂಬುಲೆನ್ಸ್‌ ಹೋಗಲು ದಾರಿ ಮಾಡಿಕೊಡುವುದು ಕಷ್ಟವಾಗುತ್ತಿದೆ. ಇದಕ್ಕೆ ಉತ್ತರವಾಗಿ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ಮಾರ್ಟ್‌ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ವಿಭಾಗದ 4ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಸಂಚಾರ ದಟ್ಟಣೆ ಸರಳೀಕರಣಗೊಳಿಸಲು ‘ಸ್ವಿಫ್ಟ್‌ ಪ್ಯಾಸೇಜ್‌’ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ.

ಮೊದಲನೆಯದಾಗಿ ಟ್ರಾಫಿಕ್ ಲೈಟ್ಸ್ ಘಟಕದಲ್ಲಿ ಎರಡು ಮೈಕ್ರೊ ಕಂಟ್ರೋಲರ್ ಬೋರ್ಡ್‌ ಮತ್ತು ದೀಪದೊಳಗೆ ಒಂದು ಮೈಕ್ರೊ ಕಂಟ್ರೋಲರ್ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಕಾರ್ಯಗಳನ್ನು ಅಳವಡಿಸಲಾಗಿದೆ. ಟ್ರಾಫಿಕ್ ದೀಪಗಳ ನಿಯಂತ್ರಣ ವ್ಯವಸ್ಥೆಯು ಕೆಂಪು ದೀಪದ ಮೇಲೆ ಲೈಟ್ ಕೋಡ್ ಸೀಕ್ವೇನ್ಸ್ ಡಿಟೆಕ್ಟರ್ ಜೊತೆಗೆ ಶಕ್ತಿಯುತವಾದ ದೀಪ ಹೊರಸೂಸುವ ಬೆಳಕಿನ ನಾಡಿಯ ಅನುಕ್ರಮವಾಗಿ ಕೆಲಸ ಮಾಡುತ್ತದೆ.

ಭಾರಿ ವಾಹನ ದಟ್ಟಣೆಯ ಸಂದರ್ಭದಲ್ಲಿ ಆಂಬುಲೆನ್ಸ್‌ ಚಾಲಕ ಲೈಟ್ ಸೆನ್ಸರ್‌ನಲ್ಲಿ ಬೆಳಕಿನ ಕಿರಣಗಳನ್ನು ಒತ್ತಿದಾಗ ಸುತ್ತಲೂ ಕಪ್ಪು, ಹಳದಿಯ ದೀಪ ಸ್ಪಷ್ಟವಾಗಿ ಕಂಡುಬರುತ್ತದೆ. ಆ ಮೂಲಕ ಆಂಬುಲೆನ್ಸ್‌ ಟ್ರಾಫಿಕ್ ಜಂಕ್ಷನ್ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ ಎಂದು ವಿದ್ಯಾರ್ಥಿಗಳು ವಿವರಿಸುತ್ತಾರೆ.

ವಿದ್ಯಾರ್ಥಿಗಳು ಮಾಡಿರುವ ಆವಿಷ್ಕಾರಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಿತಿನ್ ಬಿ.ಎಸ್., ಬಿ.ಕೆ.ಹರ್ಷಿತ್, ಪ್ರತಿಕಾ ವಿ.ಎಂ, ಧನುಷ್ ಭಾರದ್ವಾಜ್‌ ಸೇರಿದಂತೆ ಮತ್ತಿತರ ವಿದ್ಯಾರ್ಥಿಗಳ ತಂಡವು ಸುಮಾರು ₹3000 ವೆಚ್ಚದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಹೊಸ ಆವಿಷ್ಕಾರವನ್ನು ಪೂರ್ಣಗೊಳಿಸಲು ಸುಮಾರು ಒಂದು ತಿಂಗಳು ಕಾಲಾವಕಾಶ ತೆಗೆದುಕೊಂಡು ಅಂತಿಮವಾಗಿ ತಮ್ಮ ಕಾರ್ಯವನ್ನು ಸಾಧಿಸುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT